ಹೊಂಗೆ ಹೊನ್ನು

ವರ್ಷದಲ್ಲಿ ಹಲವು ಬಾರಿ ತೈಲ ಬೆಲೆ ಏರಿಕೆಯಾಗುತ್ತದೆ. ದಿನದಿಂದ ದಿನಕ್ಕೆ ತೈಲ ದೊರೆಯುವ ಪ್ರಮಾಣವು ಕಡಿಮೆಯಾಗುತ್ತಿದೆ. ದೇಶದಲ್ಲಿ ಬಳಕೆಯಾಗುವ ತೈಲದ ಶೇ.85 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ದೇಶದ ಕೋಟ್ಯಂತರ ಹಣ ವ್ಯಯಿಸುತ್ತಿರುವುದು ರಾಷ್ಟ್ರಕ್ಕೆ ಬಹುದೊಡ್ಡ ಹೊರೆ. ಇದಕ್ಕೆ ಪರಿಹಾರ ಜೈವಿಕ ಇಂಧನ.
ಹೌದು, ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಪ್ರವೃತ್ತವಾಗಿದೆ. ದಾವಣಗೆರೆ ನಗರದಿಂದ 12 ಕಿ.ಮೀ. ದೂರದಲ್ಲಿರುವ ತೋಳಹುಣಸೆಯ ಕೇಸರಿವನದಲ್ಲಿ ತರಳಬಾಳು ಜಿಲ್ಲಾ ಜೈವಿಕ ಇಂಧನ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಅರಂಭಿಸಲಾಗಿದೆ. ಗ್ರಾಮೀಣ ರೈತರ ಕುಟುಂಬಗಳಿಗೆ ಹೊಂಗೆ ಸೇರಿದಂತೆ ಇತರೆ ಎಣ್ಣೆ ಕಾಳು ಬೀಜಗಳನ್ನು ಆಯ್ದು ಅರ್ಥಿಕ ಅಭಿವೃದ್ಧಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಜಮೀನಿನ ಬದುಗಳಲ್ಲಿ ಬೀಳುಬಿದ್ದ ಭೂಮಿಯಲ್ಲಿ ಸರ್ಕಾರದ ಉತ್ತೇಜಿತ ಜೈವಿಕ ಇಂಧನ ಸಸಿ ಬೆಳೆಯುವುಕ್ಕೆ ಅವಕಾಶ ನೀಡಲಾಗುತ್ತಿದೆ.
ಬಳಕೆ ಸರಳ
ಜೈವಿಕ ಇಂಧನದ ಬಳಕೆ ಸರಳ. ವಾಹನಗಳಿಗೆ ಹಂತ- ಹಂತವಾಗಿ ಎಥೆನಾಲ್ ಮಿಶ್ರಿತ ಡೀಸೆಲ್ ಅನ್ನು ಬಳಸುವುದರಿಂದ ಎಂಜಿನ್ನಿನ ಕಾರ್ಯಕ್ಷಮತೆ, ಬಾಳಿಕೆ ಹೆಚ್ಚುತ್ತದೆ. ಜತೆಗೆ ಪರಿಸರಮಾಲಿನ್ಯ ತಗ್ಗುತ್ತದೆ. ಪ್ರಮುಖ ಜೈವಿಕ ಇಂಧನದ ಸಸ್ಯಗಳಾದ ಹೊಂಗೆ, ಜಟ್ರೋಫ, ಬೇವು, ಸಿಮರೂಬ, ಹಿಪ್ಪೆ ಸೇರಿದಂತೆ 100ಕ್ಕೂ ಅಧಿಕ ತೈಲ ಉತ್ಪಾದಕ ಸಸ್ಯ ಪ್ರಭೇದಗಳನ್ನು ಉಳಿಸಿ ಬೆಳೆಸಬಹುದು.
ಪ್ರಯೋಜನಗಳೇನು?
= ರೈತರು, ಕೃಷಿ ಕಾರ್ಮಿಕರಿಗೆ ಎಣ್ಣೆ ಬೀಜ ಮಾರಾಟದಿಂದ ನೇರ ಅರ್ಥಿಕ ನೆರವು
= ಪಾಳು, ಬಂಜರು ಭೂಮಿ ಸದ್ಬಳಕೆ.
= ಗೃಹ ಕೈಗಾರಿಕೆ ಸ್ಥಾಪನೆಗೆ ಸಹಕಾರಿ.
= ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ
= ಜೈವಿಕ ಇಂಧನ ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆ.
= ಕೃಷಿ ಉಪಯೋಗಿ ಯಂತ್ರಗಳಿಗೆ ಜೈವಿಕ ಇಂಧನ ಪೂರೈಕೆ.
= ವಿಶ್ವನಾಥ ಮಲೇಬೆನ್ನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


