ಶುಂಠಿ

ದೇಶದಿಂದ ರಫ್ತಾಗುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಶುಂಠಿ ಪ್ರಮುಖವಾದದ್ದು. ವಿಶ್ವದ ಶುಂಠಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.45ರಷ್ಟಿದೆ. ಇದನ್ನು ಹೆಚ್ಚಾಗಿ ಆಯುರ್ವೇದಿಕ್ ಔಷಧಿ ತಯಾರಿಕೆಯಲ್ಲೂ ಬಳಸುತ್ತಾರೆ. ಅಲ್ಲದೆ ಉಪ್ಪಿನಕಾಯಿ, ಸೂಪ್, ತಂಪು ಪಾನೀಯ ಮತ್ತು ಅಡುಗೆ ತಯಾರಿಸಲು ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು Zingiber officinale.
ಬೆಳೆಯುವ ವಿಧಾನ
ಶುಂಠಿ ಬೆಳೆಯಲು ಏಪ್ರಿಲ್, ಮೇ ಮತ್ತು ಜೂನ್ ಸಕಾಲ. ಬೀಜ ಬಿತ್ತುವುದಕ್ಕಿಂದ ಮೊದಲು ಎಕರೆಗೆ 10 ಟನ್ ಸಾವಯವ ಗೊಬ್ಬರ ಹಾಕಬೇಕು. ಬಳಿಕ ಬಿತ್ತನೆಗೆ ಹದಗೊಳಿಸಬೇಕು. ಮುಕ್ಕಾಲು ಅಡಿ ಎತ್ತರದ 4 ಅಡಿ ಅಗಲದ ಮತ್ತು 20 ಅಡಿ ಉದ್ದದ ಮಡಿ ಮಾಡಬೇಕು. ಬೀಜದಿಂದ ಬೀಜಕ್ಕೆ 1 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಒಂದು ಮಡಿಯಲ್ಲಿ ಈ ರೀತಿಯ ಮೂರು ಸಾಲುಗಳಿರಬೇಕು. ಎಕರೆಗೆ 600 ಕೆಜಿ ಬೀಜ ಬೇಕಾಗುತ್ತದೆ. ಬಿತ್ತಿದ ಒಂದೂವರೆ ತಿಂಗಳ ಬಳಿಕ ಮೇಲುಗೊಬ್ಬರ ನೀಡುವುದು ಒಳಿತು. ಇದು ಹೆಚ್ಚು ನೀರನ್ನು ಬಯಸುತ್ತದೆ. ನಿಯಮಿತವಾಗಿ ಮಳೆಯಾಗದಿದ್ದರೆ ಕನಿಷ್ಠ 8 ದಿನಕ್ಕೊಮ್ಮೆಯಾದರೂ ನೀರು ಕೊಡಬೇಕಾಗುತ್ತದೆ. ಇನ್ನು ಬಿತ್ತಿದ 6 ತಿಂಗಳ ಬಳಿಕ ಫಸಲು ಕೈಗೆ ಸಿಗುತ್ತದೆ. ಕಾಫಿ, ಅಡಕೆ ಮಧ್ಯೆಯೂ ಬೆಳೆಯುತ್ತದೆ.
ತಳಿಗಳು
ರಿಯೋ ಡಿ ಜನೆರೋ, ವೈನಾಡ್ ಮಾನಂತಾಡಿ, ಸುಪ್ರಭ, ಸುರುಚಿ ಮತ್ತು ಸುರಭಿ, ಮಾರನ್, ಕಾರ್ಕಳ್, ತಾಳುಗುಪ್ಪ, ಎರ್ನಾಡ್, ನಾದನ್ ಪ್ರಮುಖವಾಗಿವೆ.
ಮಣ್ಣು
ಇದಕ್ಕೆ ಮರಳುಮಿಶ್ರಿತ ಗೋಡು ಮಣ್ಣು, ಜೇಡಿಮಣ್ಣು ಇದ್ದರೆ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಸಕಲೇಶಪುರ ತಾಲೂಕಿನ ಮೂಗ್ಲಿಯ ಲಿಂಗರಾಜು (9448719921) ಅವರನ್ನು ಸಂಪರ್ಕಿಸಬಹುದು.
ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


