ಚಂಡೀಗಢದಲ್ಲಿ ಅಂತಾರಾಷ್ಟ್ರೀಯ ತೋಟಗಾರಿಕೆ ಮೇಳ
ಫೆ. 20ರಿಂದ 22ರವರೆಗೆ ಮೂರು ದಿನಗಳ ಕಾಲ 'ಮೀಡಿಯಾ ಟುಡೇ' ಬಳಗವು ಚಂಡೀಗಡದಲ್ಲಿ 6ನೇ ಅಂತಾರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿಸಿದೆ. ಮೇಳ ಚಂಡೀಗಢದ 34ನೇ ಸೆಕ್ಟರ್‌ಲ್ಲಿರುವ ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ.
ಇದರ ಜತೆಗೆ ಅಂತಾರಾಷ್ಟ್ರೀಯ ಪರಿಸರ ಮೇಳ, ಭೂ ಮತ್ತು ಹೂದೋಟ ಪ್ರದರ್ಶನ, ಭಾರತೀಯ ಆಲೂಗಡ್ಡೆ ಪ್ರದರ್ಶನ ನಡೆಯುವುದು ಮತ್ತೊಂದು ವಿಶೇಷ. ಹೂದೋಟ ಮಾಡುವುದು, ಪ್ಯಾಕಿಂಗ್ ಮೊದಲಾದ ಸಂಗತಿಗಳ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಹಾಲೆಂಡ್, ಜರ್ಮನಿ, ಫ್ರಾನ್ಸ್, ಇಸ್ರೇಲ್, ಸ್ಪೇನ್ ದೇಶಗಳ ತಂತ್ರಜ್ಞಾನ, ತೋಟಗಾರಿಕೆ ಪೂರಕ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ. ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಕೃಷಿ ಯಂತ್ರೋಪಕರಣಗಳು ಮತ್ತು ಬಿಡಿ ಭಾಗಗಳು, ಆಲೂಗಡ್ಡೆಯ ಉತ್ಪನ್ನಗಳು ಮತ್ತು ತಂತ್ರಜ್ಞಾನ, ಶೈತ್ಯಾಗಾರಗಳು ಮತ್ತು ಸಾಗಣೆ, ಬೀಜ, ಅಗ್ರೋಕೆಮಿಕಲ್ ಮತ್ತು ನೀರಾವರಿ, ಸಾವಯವ, ಕೃಷಿ ಹಣಕಾಸು ಮತ್ತು ವಿಮೆ, ಸಂಸ್ಕರಣೆ ಮತ್ತು ಪ್ಯಾಕಿಂಗ್, ವೈದ್ಯಕೀಯ ಗಿಡಮೂಲಿಕೆ ಉತ್ಪನ್ನಗಳು, ತಾಜಾ ಮಾರಾಟ ಹಾಗೂ ಪುಷ್ಪಗಾರಿಕೆ ಸಂಪತ್ತು ತಂತ್ರಜ್ಞಾನ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಮೇಳದ ಸಮನ್ವಯಕಾರರಾದ ಎಸ್. ಜಾಫರ್ ನಖ್ವಿ ಅವರು, ಈ ಪ್ರದರ್ಶನದ ಮೂಲಕ ತೋಟಗಾರಿಕೆ ಪರಿಕಲ್ಪನೆ ವಿಸ್ತರಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿ ಹೊಂದಲಾಗಿದೆ. ಅಲ್ಲದೆ, ತೋಟಗಾರಿಕೆ, ಹೂವಿನ ವ್ಯಾಪಾರ, ಹಸಿರು ತಂತ್ರಜ್ಞಾನ, ಶೈತ್ಯಾಗಾರ ಮತ್ತು ಭಾರತದಲ್ಲಿ ನೀರಿನ ನಿರ್ವಹಣೆ ಕುರಿತು ಮೇಳದಲ್ಲಿ ಸಾಕಷ್ಟು ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ www.hortie xpo.com ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

