ನಿಂಬೆ

ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ ಹೆಸರು Citrus aurantifolia.
ಬೆಳೆಯುವ ವಿಧಾನ
ಮೊದಲು 2x2 ಉದ್ದಗಲ ಮತ್ತು ಅಷ್ಟೇ ಆಳದ ಗುಂಡಿ ತೊಡಬೇಕು. ಗಿಡದಿಂದ ಗಿಡಕ್ಕೆ 18 ಅಡಿ ಅಂತರ ಇರಬೇಕು. ಗುಂಡಿ ತೋಡಿ 15 ದಿನ ಬಿಸಿಲಿಗೆ ಒಣಗಲು ಬಿಡಬೇಕು. ಬಳಿಕ ಗುಂಡಿ ತೋಡಿದ ಮೇಲ್ಭಾಗದ ಮಣ್ಣನ್ನು ಗುಂಡಿಗೆ ಹಾಕಬೇಕು. ಅದಕ್ಕೆ ಕಾಂಪೋಸ್ಟ್, ಎರೇಹುಳು ಗೊಬ್ಬರ ಕೊಡಬೇಕು. ನಂತರ ಗುಂಡಿಯಲ್ಲಿ ಗಿಡ ನೆಡಬೇಕು. ಎಕರೆಗೆ ನೆಡಲು 100 ಗಿಡ ಬೇಕಾಗುತ್ತದೆ. ಬಳಿಕ ನಿಯಮಿತವಾಗಿ ನೀರು ಹಾಯಿಸಬೇಕು. ಇದರ ಮಧ್ಯೆ ಅಂತರ ಬೇಸಾಯವಾಗಿ ವಿವಿಧ ಬೆಳೆ ಬೆಳೆಯಬಹುದು. ನಿಂಬೆ ಗಿಡ ನೆಟ್ಟ 6 ವರ್ಷದವರೆಗೆ ಅಂತರ ಬೇಸಾಯ ಮಾಡಬಹುದು. ನಿಂಬೆ ಗಿಡ ನೆಟ್ಟ 4ನೇ ವರ್ಷದಿಂದ ಹಣ್ಣು ಬಿಡಲು ಶುರು ಮಾಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡದಿಂದ ವರ್ಷಕ್ಕೆ 2 ಸಾವಿರದಿಂದ 3 ಸಾವಿರದವರೆಗೆ ನಿಂಬೆ ಹಣ್ಣು ಸಿಗುತ್ತದೆ. ಜೂನ್‌ದಿಂದ ಆಗಸ್ಟ್‌ವರೆಗೆ ನಿಂಬೆ ಗಿಡ ನಾಟಿ ಮಾಡಲು ಪ್ರಶ್ಶಸ್ತ. ಒಂದು ನಿಂಬೆ ಗಿಡ ನೆಟ್ಟರೆ ಕನಿಷ್ಠ 50 ವರ್ಷದವರೆಗೆ ಇಳುವರಿ ಪಡೆಯಬಹುದು. ಇದರಲ್ಲಿ ಪ್ರಮುಖವಾಗಿ ಕಾಗ್ಜಿ ಲೈಮ್ ಮತ್ತು ತಾಹೇತಿ ನಿಂಬೆ ಮತ್ತು ಸ್ಥಳೀಯ ತಳಿಗಳು ಬಳಕೆಯಲ್ಲಿವೆ.
ರೋಗಗಳು/ಕೀಟ
ಎಲೆಸುರುಳಿ ರೋಗ, ಬೇರು ಕೊಳೆ ರೋಗ, ಬೂದಿ ರೋಗ, ಚಿಬ್ಬು ಪ್ರಮುಖವಾಗಿ ಬರುವ ರೋಗಗಳು. ಕಜ್ಜಿ, ನಿಂಬೆ ಚಿಟ್ಟೆ, ಎಲೆ ಸುರಂಗ ಹುಳು, ಸಸ್ಯಹೇನು, ಬಿಳಿನೊಣ, ಬೂಸ್ಟ್, ತಿಗಣೆಯಂಥ ಕೀಟಗಳು ಕಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಗುಲ್ಬರ್ಗ ತಾಲೂಕಿನ ಗರೂರು ಗ್ರಾಮದ ಶಾಮರಾವ್ ಪಾಟೀಲ್(ಮೊ. 9902837727) ಅವರನ್ನು ಸಂಪರ್ಕಿಸಬಹುದು.
ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


