ತರಕಾರಿ ಶಾಲೆ
ಮಕ್ಕಳಿಗೆ ಸದುಪಯೋಗವಾಗಬಲ್ಲ ಕೆಲವು ಯೋಜನೆಗಳು ಶಿಕ್ಷಕರನ್ನು ದಿನವಿಡೀ ಬರೀ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕಡತ ತುಂಬುವುದರಲ್ಲೇ ಮಗ್ನರಾಗುವಂತೆ ...

ಮಕ್ಕಳಿಗೆ ಸದುಪಯೋಗವಾಗಬಲ್ಲ ಕೆಲವು ಯೋಜನೆಗಳು ಶಿಕ್ಷಕರನ್ನು ದಿನವಿಡೀ ಬರೀ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕಡತ ತುಂಬುವುದರಲ್ಲೇ ಮಗ್ನರಾಗುವಂತೆ ಮಾಡಿವೆ. ಈ ಎಲ್ಲಾ ಹೊರೆಗಳನ್ನು ಮೀರಿ ವಿದ್ಯಾರ್ಥಿಗಳಲ್ಲಿ ಸಾವಯವ ತರಕಾರಿ ಕೃಷಿ ಬಗ್ಗೆ ಸಂಚಲನ ಮೂಡಿಸಿದ್ದಾರೆ ವಿಟ್ಲ ಸಮೀಪದ ಕೇಪಿನ ಕಲ್ಲಂಗಳ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಮೇಶ ಎಂ. ಬಾಯಾರು.
ಅಕ್ಷರ ದಾಸೋಹ ಯೋಜನೆ ಪ್ರಾರಂಭವಾದ ಸಮಯದಲ್ಲಿ ರಮೇಶ್ ಅವರು ಕೇಪಿನಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದರು. ಆಗೆಲ್ಲಾ ತರಕಾರಿಗಳನ್ನು ಪೇಟೆಯಿಂದಲೇ ಹಣ ಕೊಟ್ಟು ತರಬೇಕಾಗಿತ್ತು. ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಗುಣಮಟ್ಟ ಹಾಗೂ ಮೌಲ್ಯ ನಮಗೆಲ್ಲಾ ಗೊತ್ತೇ ಇದೆ.
ಶ್ರಮದ ಹಾದಿ
ಈ ನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಮೇಶ ಮತ್ತು ಶಿಕ್ಷಕ ವರ್ಗ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಮೊದಲಾಗಿ ಅವರು ಸಾವಯವ ತರಕಾರಿ ಬೆಳೆಸುವುದರ ಬಗ್ಗೆ ಮಾಹಿತಿಯನ್ನು ಸಮುದಾಯದತ್ತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ತಿಳಿಸಿದರು. ಯೋಜನೆ ಪ್ರಾರಂಭವಾದ ಸಮಯದಲ್ಲಿ ಮನೆಗಳಲ್ಲಿ ತರಕಾರಿ ಬೆಳೆಸುವ ವಿದ್ಯಾರ್ಥಿಗಳ ಸಂಖ್ಯೆ ಬಹು ಕಡಿಮೆಯಾಗಿತ್ತು. ಹೆಚ್ಚಾಗಿ ಹೆತ್ತವರು ತರಕಾರಿಗಳನ್ನು ಪೇಟೆಯಿಂದಲೇ ತರುತ್ತಿದ್ದರು.
ಬೀಜ ಸಂಗ್ರಹ
ರಮೇಶ ಬಾಯಾರು, ಮೊದಲಾಗಿ ತರಕಾರಿ ಬೆಳೆಸುವವರ ಮನೆಗಳಿಂದ, ಕೃಷಿ ಪ್ರತಿಷ್ಠಾನದಿಂದ, ಜಲಾನಯನ ಇಲಾಖೆಯಿಂದ ತರಕಾರಿ ಬೀಜ ಸಂಗ್ರಹಿಸಿ, ತರಕಾರಿ ಬೆಳೆಯದ ಮಕ್ಕಳ ಮನೆಗಳಿಗೆ ಹಂಚಿದರು. ಜೊತೆಗೆ ಪ್ರತಿ ಮನೆಗಳಿಗೂ ಭೇಟಿ ನೀಡಿ ಅದರ ಮೇಲ್ವಿಚಾರಣೆ ಮಾಡಿದರು.
ರಮೇಶ ಎಂ. ಬಾಯಾರು ಅವರು ತಮ್ಮ ಯೋಜನಯ ವಿಕಸನದಲ್ಲಿ ತರಕಾರಿ ಮೇಳ ಹಮ್ಮಿಕೊಂಡರು. ಈ ಮೇಳದಲ್ಲಿ ಸ್ವತಃ ವಿದ್ಯಾರ್ಥಿಗಳಿಂದಲೇ ಬೆಳೆಸಲ್ಪಟ್ಟ ತರಕಾರಿ ಪ್ರದರ್ಶಿಸಿದರು. ಅಲ್ಲದೆ, ಪ್ರೋತ್ಸಾಹ ರೂಪದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಜೊತೆಗೆ ಆಹಾರ ಸನ್ನದು ಎಂಬ ಕಾರ್ಯಕ್ರಮ ಮಾಡಿ ಪಾಲಕರು ಮತ್ತು ಮಕ್ಕಳಿಗೆ ಸಂತುಲಿತ ಆಹಾರ ಸೇವನೆಯ ಮೂಲಕ ಆರೋಗ್ಯ ರಕ್ಷಣೆ ಮಾಡುವ ಬಗ್ಗೆ ಮಾಹಿತಿ ಶಿಬಿರದ ಮೂಲಕ ಸಾತ್ವಿಕ ಆಹಾರ ಬಳಕೆಯ ಅಗತ್ಯದ ಮನವರಿಕೆ ಮಾಡಿಸಿದರು.
ಕೃಷಿ ಮಾಹಿತಿ ಶಿಬಿರ
ನುರಿತ ಕೃಷಿಕರಿಂದ ಕೃಷಿ ಮಾಹಿತಿ ಶಿಬಿರಗಳು ಮನೆಮನೆಗಳಲ್ಲಿ ನಡೆಸಿದರು. ಬೇರೆ ಬೇರೆ ಸಾವಯವ ಕೃಷಿಕರ ಮನೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅವರಿಂದ ಪ್ರಾತ್ಯಕ್ಷಿಕೆ ಕೊಡಿಸಿದರು. ಶಾಲೆಯಲ್ಲಿ ಸರಾಗವಾಗಿ 12 ಕಂತುಗಳಲ್ಲಿ ಸಾವಯವ ಆಹಾರ ಸರಣಿ ಕಾರ್ಯಕ್ರಮ ನಡೆಸಿದರು. ಇಂತಹ ಆದರ್ಶ ಶಿಕ್ಷಕ ಪ್ರತಿ ಶಾಲೆಯಲ್ಲೂ ಹೊರ ಹೊಮ್ಮಲಿ. ಮಾಹಿತಿಗಾಗಿ ಸಂಪರ್ಕಿಸಿ ರಮೇಶ್ ಬಾಯಾರು, ಮೊ. 9448626093.
- ಉದಯ್ ವಿಟ್ಲ
udayvitla@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


