ಮನೆ ಬಾಗಿಲಿಗೆ ಗೊಬ್ಬರ

ಆಧುನಿಕ ಬದುಕಿನಲ್ಲಿ ಹಣ ತೆತ್ತರೆ ಆಯಿತು, ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದು ಬಿಡುತ್ತವೆ. ಮೊಬೈಲ್, ಆನ್‌ಲೈನ್...ಗಳೆಂಬ ಬೆರಳ ತುದಿಯ ಆಯ್ಕೆಗಳಿಂದ ಇದು ಸಾಧ್ಯ. ಆದರೆ, ಕೃಷಿಗೆ ಇವು ದೂರ.
ಬಹುಶಃ ಕೀಟನಾಶಕ ಕಂಪನಿಗಳು ಕೃಷಿಕನ ಮನೆಬಾಗಿಲಿಗೆ ಬಂದು ಬಿಡಾರ ಮಾಡುವುದು ಬಿಟ್ಟರೆ ಮಿಕ್ಕಂತೆ ಕೃಷಿಕನ ಅವಶ್ಯಕತೆಯನು ಸುಲಭದಲ್ಲಿ ಪೂರೈಸುವ ವ್ಯವಸ್ಥೆ ಅಪರೂಪ.
ಇಲ್ಲೊಬ್ಬರು ಕೃಷಿ ಒಳಸುರಿಯನು ಪೂರೈಸುವ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ದ.ಕ. ಜಿಲ್ಲೆಯ ಅಡ್ಯನಡ್ಕದ ನಾರ್ಣಮೂಲೆಯ ಅಮ್ಮು ಮೂಲ್ಯರಿಗೆ ಫೋನಾಯಿಸಿದರೆ ಆಯಿತು, ಒಂದೆರಡು ದಿವಸದಲ್ಲಿ ಗೊಬ್ಬರ ನಿಮ್ಮ ಮನೆ ಬಾಗಿಲಿಗೆ. ಮೂಲ್ಯರ ವ್ಯವಸ್ಥೆಯು ದ.ಕ. ಜಿಲ್ಲೆಗೆ ಮಾತ್ರ. ಅದರಲ್ಲೂ ಬಂಟ್ವಾಳ, ಪುತ್ತೂರು, ಮಂಗಳೂರಿಗೆ ಸೀಮಿತ.
ಗೊಬ್ಬರ ಸಂಗ್ರಹಿಸಿ, ಸಂಬಂಧಪಟ್ಟ ಕೃಷಿಕರಿಗೆ ಪೂರೈಸುವುದಷ್ಟೇ ಕೆಲಸ. ನೇರ ವ್ಯವಹಾರ. ಹಾಲಿಗಾಗಿ ದನ ಸಾಕುವ ಕುಟುಂಬಕ್ಕೆ ಅಮ್ಮು ಮೂಲ್ಯರ ವ್ಯವಸ್ಥೆ ಉಪಯೋಗಿ. 400- 500 ಮಂದಿ ಗೊಬ್ಬರ ಪೂರೈಸುವವರು ಬಂಟ್ವಾಳ, ಪುತ್ತೂರು ತಾಲೂಕುಗಳಲ್ಲಿದ್ದಾರೆ.
ಯಾವ ದಿವಸ ಯಾವ ಲೈನಿಗೆ ಗೊಬ್ಬರ ಬೇಕೋ, ಆ ಲೈನಿನಲ್ಲಿರುವ ಪೂರೈಕೆದಾರರನು ದೂರವಾಣಿಯಲ್ಲಿ ಸಂಪರ್ಕಿಸಿ ಸೂಚಿಸಿರುತ್ತಾರೆ. ಅಲ್ಲಿಂದ ಮಿನಿ ಲಾರಿಯಲ್ಲಿ ತುಂಬಿಸಿ ಆರ್ಡರ್ ಮಾಡಿದವರ ತೋಟಕ್ಕೆ ಪೂರೈಕೆ. ಲಾರಿಯಿಂದ ಗೊಬ್ಬರ ಇಳಿಸುತ್ತಿದ್ದಂತೆ ಹಣ ಎಣಿಸಿದರಾಯಿತು. ಒಂದು ಬುಟ್ಟಿಗೆ 20- 25 ರು.ನಂತೆ ಖರೀದಿ. ಒಂದು ಬುಟ್ಟಿ ಅಂದರೆ 35 ಕಿಲೋ. ಒಂದು ಮಿನಿ ಲಾರಿಯಲ್ಲಿ 125 ಬುಟ್ಟಿಯ ಲೋಡ್.
2- 30 ಲೋಡ್ ತನಕ ಗೊಬ್ಬರಕ್ಕೆ ಆರ್ಡರ್ ಮಾಡುವ ಕೃಷಿಕರಿದ್ದಾರೆ. ಮೊದಲು ಸಮೃದ್ಧ ಹಾಲು, ಯಥೇಚ್ಛ ಗೊಬ್ಬರ ಹೊಂದಿದವರು ಹೈನುಗಾರಿಕೆ ಬಿಟ್ಟಿದ್ದಾರೆ. ನನಿಂದ ಗೊಬ್ಬರ ಖರೀದಿಸುತ್ತಾರೆ ಎಂದು ಅಮ್ಮು ಮೂಲ್ಯರು ಅನುವಾಗ ಒಂದು ಕಾಲಘಟ್ಟದ ಹೈನು ಸಮೃದ್ಧಿಯು ಮಿಂಚಿ ಮರೆಯಾಗುತ್ತದೆ.
ಗೊಬ್ಬರ ಮಾತ್ರವಲ್ಲ, ಸಗಣಿ, ಬೂದಿ, ತೆಂಗಿನಕಾಯಿಯ ಸಿಪ್ಪೆ, ಕೋಳಿ ಗೊಬ್ಬರ.. ಎಲ್ಲವೂ ಲಭ್ಯ. ಗೊಬ್ಬರವನು ಮೂಲ್ಯರು ಸಂಗ್ರಹಿಸಿಡುವುದಿಲ್ಲ. ಎಲ್ಲವೂ ಲಿಂಕ್ ಮೂಲಕ ಪೂರೈಕೆ.
ಲಾರಿಗೆ ಗೊಬ್ಬರ ತುಂಬುವ ಕಾರಣ ದಿನನಿತ್ಯ ತೊಳೆಯಬೇಕು. ಸಂಜೆಯ ಹೊತ್ತಿಗೆ ಸಹಾಯಕರಿಗೆ ವೇತನ ನೀಡಬೇಕು. ಜತೆಗೆ ಲಾರಿಯ ನಿರ್ವಹಣೆ. ಇವೆಲ್ಲವನೂ ಪೂರೈಸಿದ ಬಳಿಕ ನನ ಕುಟುಂಬದ ಜೀವನ ಸಲೀಸಾಗಿ ಸಾಗುತ್ತದೆ ಎನುತ್ತಾರೆ.
ಕೇಳಿದವರಿಗೆ ಕೊಡುವಷ್ಟು ಗೊಬ್ಬರ ಪೂರೈಕೆಯ ಚೈನ್ ಇದೆ. ರಾಸಾಯನಿಕ ಬಿಡುತ್ತಾ ಇದ್ದಾರೆ. ಅಲ್ಲಿಲ್ಲಿ ಮಾತನಾಡುವಾಗ ಸಾವಯವಕ್ಕೆ ಒಲವು ಹೆಚ್ಚಾದುದು ಕಂಡುಬರುತ್ತದೆ ಎನುವ ಮೂಲ್ಯರು, ಎಲ್ಲ ಕಡೆ ದನಗಳು ಕಡಿಮೆಯಾಗಿವೆ. ಉಳ್ಳವರಲ್ಲಿ ದನ ಬಿಡಿ, ಕೆಲಸಕ್ಕೆ ಜನಗಳೇ ಇಲ್ಲವಲ್ಲಾ... ಅಮ್ಮು ಮೂಲ್ಯರ ಗೊಬ್ಬರ ಕಾಯಕಕ್ಕೆ ಹದಿನಾರು ವರುಷ. ಐದು ವರುಷದ ಹಿಂದಿನವರೆಗೆ ತೋಟದ ಕೆಲಸಕ್ಕೆ ಕಾರ್ಮಿಕರನು ಪೂರೈಸುವ ಕಾಂಟ್ರಾಕ್ಟ್ ವ್ಯವಸ್ಥೆಯೂ ಇವರಲ್ಲಿತ್ತು. 60- 70 ಜನರನು ನಿಭಾಯಿಸುತ್ತಿದ್ದೆ. ನಂತರ ಜನರ ಅಲಭ್ಯತೆ. ಸಿಕ್ಕರೂ ದಿನಕ್ಕೆ 300- 400 ಸಂಬಳ ಕೇಳುತ್ತಾರೆ. ಸ್ಪಷ್ಟವಾಗುತ್ತಿದ್ದಂತೆ ಈ ವ್ಯವಸ್ಥೆಯನು ಬಿಟ್ಟುಬಿಟ್ಟೆ ಎನುತ್ತಾರೆ.
- ನಾ. ಕಾರಂತ ಪೆರಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


