ತುಳಸಿ ಜಪ

ಮಳೆ ಕೊರತೆ, ಅಂತರ್ಜಲ ಕುಸಿತ, ಮೊಳಕೆಯೊಡೆಯದ ಬೀಜ, ಮಾರುಕಟ್ಟೆ ಸಮಸ್ಯೆ, ಕೂಲಿಯಾಳುಗಳ ಕೊರತೆ...
- ಹೀಗೆ ರೈತರು ಸದಾ ಒಂದಿಲ್ಲೊಂದು ಸಮಸ್ಯೆಗಳನು ಎದುರಿಸುತ್ತಲೇ ಇರುತ್ತಾರೆ. ಸಂಕಷ್ಟಗಳ ನಡುವೆಯೂ ರೈತರಿಗೆ ಒಂದಲ್ಲ ಒಂದು ಪರಿಹಾರವಿದ್ದು, ಧೃತಿಗೆಡುವ ಅಗತ್ಯವಿಲ್ಲ ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಉಂಟು.
ಕೊಳ್ಳೇಗಾಲ ತಾಲೂಕಿನ ಉಗನಿ ಗ್ರಾಮದ ರೈತರೀಗ ಕಡಿಮೆ ಖರ್ಚಿನಲ್ಲಿ ತುಳಸಿ ಬೆಳೆದು ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ. ಇವರು ಬೆಳೆದ ತುಳಸಿಯನು ಬೆಂಗಳೂರಿನ ಖಾಸಗಿ ಕಂಪನಿಗಳು ಕೊಳ್ಳುತ್ತಿವೆ. ಇದರಿಂದ ಈ ಭಾಗದ 40ಕ್ಕೂ ಹೆಚ್ಚು ರೈತರು ತಮ್ಮ ಜಮೀನಿನಲ್ಲಿ ಸಾಧ್ಯವಾದಷ್ಟು ತುಳಸಿಯನೆ ಬೆಳೆಯುತ್ತಿದ್ದಾರೆ. ಕೆ.ಜಿ.ಗೆ 6- 9 ಸಂಪಾದಿಸುತ್ತಿದ್ದಾರೆ.
ಕಂಪನಿ ಪ್ರೋತ್ಸಾಹ
ತುಳಸಿ ಬೆಳೆಯಲು ಕಂಪನಿಯೊಂದು ಪ್ರೋತ್ಸಾಹಿಸುತ್ತಿದೆ. ಬೆಳೆಯನೂ ಕೊಳ್ಳುತ್ತಿದೆ. ಅಗತ್ಯ ತುಳಸಿ ಬೀಜ, ಪೋಷಕಾಂಶ ಪೂರೈಸುವ ಜವಾಬ್ದಾರಿಯನೂ ಕಂಪನಿಯೇ ತೆಗೆದುಕೊಳ್ಳುತ್ತದೆ. ತುಳಸಿಗೆ ರಾಸಾಯನಿಕ ಗೊಬ್ಬರ ಬಳಸುವಂತಿಲ್ಲ. ಹಾಗಾಗಿ ಸಾವಯವ, ಕೊಟ್ಟಿಗೆ ಗೊಬ್ಬರವನೆ ಬಳಸಬೇಕು. ರಾಮ, ಕೃಷ್ಣ ಹಾಗೂ ಲೆಮೆನ್ ಎಂದು ಕರೆಯುವ ಮೂರು ತಳಿಗಳಿವೆ. ಲೆಮೆನ್ ತುಳಸಿಗೆ ಬೇಡಿಕೆ ಹೆಚ್ಚು. ಕೆ.ಜಿ.ಗೆ ರು. 6- ರು. 9 ಸಿಕ್ಕರೆ, ರಾಮ ತುಳಸಿಗೆ ರು. 6- ರು. 7 ಹಾಗೂ ಕೃಷ್ಣ ತುಳಸಿಗೆ ರು. 7- ರು. 8 ಸಿಗುತ್ತೆ.
ಒಮ್ಮೆ ಕೈಗೆ ಬಂದ ತುಳಸಿ ಕನಿಷ್ಠ ಎರಡು ವರ್ಷದವರೆಗೂ ಫಸಲು ನೀಡುತ್ತೆ. ಎಕರೆ ಜಮೀನಲ್ಲಿ ಕಾಲ- ಕಾಲಕ್ಕೆ ನೀರು ಹಾಯಿಸಿ, ತಿಂಗಳಿಗೊಮ್ಮೆ ಕಟಾವು ಮಾಡಿದರೆ 2- 3 ಟನ್‌ವರೆಗೂ ಇಳುವರಿ ನಿಕ್ಕಿ. ವರ್ಷಕ್ಕೆ 12ರಿಂದ 14 ಬಾರಿ ತುಳಸಿಯನು ಕಟಾವು ಮಾಡಬಹುದು. ಸುಮಾರು ರು. 50 ಸಾವಿರ ಬಂಡವಾಳ ಹೂಡಿದರೆ ಕನಿಷ್ಠ ರು. 1.50 ಲಕ್ಷ ಲಾಭ ಪಡೆದ ಉದಾಹರಣೆಗಳಿವೆ.
ಸಮರ್ಪಕ ನೀರು ಬೇಕು
ತುಳಸಿಗೆ ವಾರದಲ್ಲಿ 2 ದಿನ ನೀರು ಹಾಯಿಸಬೇಕು. ಎಲ್ಲ ಬೆಳೆಯಂತೆ ಕಳೆ ಹುಟ್ಟದಂತೆ ನೋಡಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ ಬಳಸಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ತುಳಸಿ ಖರೀದಿಗೆ ಕಂಪನಿ ಪ್ರತಿನಿಧಿಗಳು ಸ್ಥಳಕ್ಕಾಗಮಿಸಿ, ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಈ ಗ್ರಾಮದಲ್ಲಿ ತೂಕದ ಯಂತ್ರವೊಂದನು ತರಿಸಲಾಗಿದೆ. ಖರೀದಿಸಿದ ತುಳಸಿಗೆ ಎರಡು ವಾರದೊಳಗೆ ರೈತರ ಖಾತೆಗೆ ಕಂಪನಿಯಿಂದ ಹಣ ಜಮೆಯಾಗುತ್ತದೆ.
ರೈತರಿಗೆ ಕಡಿಮೆ ಖರ್ಚಿನಲ್ಲಿ ಬೆಳೆಯಲು ಸಾಧ್ಯವಾಗಿರುವ ತುಳಸಿ ಲಾಭದಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ನಾನು ಕಡಿಮೆ ಖರ್ಚಿನಲ್ಲಿ ತುಳಸಿಯನು ವರ್ಷದಿಂದ ಬೆಳೆಯುತ್ತಿದ್ದೇನೆ. ಎಕರೆಗೆ ರು. 5 ಸಾವಿರ ಖರ್ಚಾಗುತ್ತದೆ. ಇದಕ್ಕೆ ಕಂಪನಿಯೊಂದು ಪ್ರೋತ್ಸಾಹಿಸುತ್ತಿರುವುದರಿಂದ ಉತ್ತಮ ಆದಾಯ ಬರುತ್ತಿದೆ. ವರ್ಷಕ್ಕೆ ಕನಿಷ್ಠ 50 ಸಾವಿರ ಬಂಡವಾಳ ಹೂಡಿದರೆ ರು. 2 ಲಕ್ಷ ಸಂಪಾದಿಸಬಹುದು.
- ರಾಚೇಗೌಡ, ತುಳಸಿ ಬೆಳೆಗಾರ
- ಎನ್. ನಾಗೇಂದ್ರಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


