ಬರೋಬ್ಬರಿ ರಬ್ಬರ್

ವಿಶ್ವದಲ್ಲಿ ನೈಸರ್ಗಿಕ ರಬ್ಬರ್ ಬೆಳೆಯುವ ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ. ಅದೇ ರೀತಿ ಕರ್ನಾಟಕವೂ ರಬ್ಬರ್ ಬೆಳೆಯುವ 3ನೇ ದೊಡ್ಡ ರಾಜ್ಯ. ಇತ್ತೀಚೆಗೆ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಬಹಳ ರೈತರು ರಬ್ಬರ್ ಕಡೆಗೆ ಮುಖಮಾಡಿದ್ದಾರೆ. ಇದನ್ನು ಮಲೆನಾಡು, ಕರಾವಳಿ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯುತ್ತಾರೆ. ಕಾರಣ ಅಲ್ಲಿ ರಬ್ಬರ್ ಬೆಳೆಯಲು ಪೂರಕ ವಾತಾವರಣವಿದೆ.
ಬೆಳೆಯುವ ವಿಧಾನ
ಎಕರೆಗೆ 200 ರಬ್ಬರ್ ಸಸಿ ಬೇಕಾಗುತ್ತದೆ. ಮೊದಲು ಜಮೀನನ್ನು ಹದ ಮಾಡಿರಬೇಕು. ಬಳಿಕ ನಿರ್ದಿಷ್ಟ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ಆಗಾಗ್ಗೆ ಅಗತ್ಯ ನೀರು, ಗೊಬ್ಬರ ನೀಡುತ್ತಿರಬೇಕು. ಸಸಿ ನಾಟಿ ಮಾಡಿದ 5 ವರ್ಷದ ಬಳಿಕ ಇಳುವರಿ ಕೊಡಲಾರಂಭಿಸುತ್ತದೆ. ಇದರ ಮಧ್ಯೆ ಅಂತರ ಬೆಳೆಯಾಗಿ ಬಾಳೆ, ಅನಾನಸ್ ಸೇರಿದಂತೆ ತರಕಾರಿಗಳನ್ನು ಬೆಳೆಯಬಹುದು. ರಬ್ಬರ್ ಸಸಿ ನಾಟಿ ಮಾಡಿದ 2 ವರ್ಷದವರೆಗೆ ಮಾತ್ರ ಅಂತರ ಬೆಳೆ ಬೆಳೆಯಬಹುದು. ನಂತರ ಅಂತರ ಬೆಳೆ ಬೆಳೆಯಬಾರದು. ಒಮ್ಮೆ ಸಸಿ ನಾಟಿ ಮಾಡಿದರೆ 40 ವರ್ಷ ಇಳುವರಿ ನೀಡುತ್ತದೆ. ಜೂನ್‌ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಸಸಿ ನಾಟಿ ಮಾಡಲು ಸಕಾಲ. ಇದರಲ್ಲಿ ಪ್ರಮುಖವಾಗಿ 105, 414, 430 ಎಂಬ ಪ್ರಮುಖ ತಳಿಗಳಿವೆ.
ಮಣ್ಣು
ಕಪ್ಪು ಮಣ್ಣು, ಕೆಂಪು ಮಣ್ಣು ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮ. ಹೆಚ್ಚು ಮಳೆ ಬೀಳುವ, ತಂಪಾದ ವಾತಾವರಣವಿರಬೇಕು. 20- 34 ಸೆ. ಉಷ್ಣಾಂಶ ರಬ್ಬರ್‌ಗೆ ಹಿತಕರ.
ರೋಗಗಳು
ರಬ್ಬರ್ ಕಾಡುವ ರೋಗಗಳ ಪೈಕಿ ಸೊರಗು ರೋಗ, ನೀಲಿ ಥಿಂಕ್ ರೋಗ ಪ್ರಮುಖವಾಗಿವೆ.
ಸಹಾಯಧನ
ರಬ್ಬರ್ ಬೋರ್ಡ್ ವತಿಯಿಂದ ಬೆಳೆಗಾರರಿಗೆ ಸಹಾಯಧನ ನೀಡಲಾಗುತ್ತದೆ. ಎಕರೆಗೆ ರು. 20 ಸಾವಿರ ಹಣ ನೀಡುತ್ತದೆ. ಅಲ್ಲದೆ, ನೀರಾವರಿ ಅಳವಡಿಸಿಕೊಳ್ಳಲು, ತಂತಿ ಬೇಲಿ ಹಾಕಲು ಸೇರಿದಂತೆ ಮೊದಲಾದವುಗಳಿಗೆ ಸಹಾಯಧನ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದ ರಾಜಾರಾಮ್(ಮೊ. 8088615676) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


