ಕೃಷಿ ಕೋರ್ಸ್
ಎಲ್ಲ ಕ್ಷೇತ್ರಗಳಂತೆ ಕೃಷಿರಂಗವೂ ನಿಂತ ನೀರಲ್ಲ. ಬದಲಾವಣೆಗೆ ಸಾಕಷ್ಟು ಅವಕಾಶಗಳುಂಟು. ಅದಕ್ಕಾಗಿ ಕೃಷಿಕರು ಮೊದಲು ಶಿಕ್ಷಣದತ್ತ ಮುಂದಾಗಬೇಕು. ಬಹಳಷ್ಟು ಮಂದಿಗೆ ಕೃಷಿ ಶಿಕ್ಷಣ ಬಗ್ಗೆ ಮಾಹಿತಿ ಕೊರತೆ ಇದೆ. ಕೃಷಿ ಕುರಿತ ಆಸಕ್ತರಿಗೆ ಹಲವು ಕೋರ್ಸ್‌ಗಳು ಲಭ್ಯ. ಬೇಕಾದ ಕೋರ್ಸ್ ಆಯ್ದುಕೊಂಡು ಬದುಕು ಹಸನು ಮಾಡಿಕೊಳ್ಳಬಹುದು.
ಕೋರ್ಸ್‌ಗಳು
ಮೊಟ್ಟ ಮೊದಲು ಕೃಷಿ ಸಂಬಂಧಿಸಿದ ಕೋರ್ಸ್‌ಗಳನ್ನು ಮೂರು ವಿಭಾಗಳನ್ನಾಗಿ ವಿಂಗಡಿಸಲಾಗುತ್ತದೆ. ಅಂದರೆ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ. ಇವುಗಳಲ್ಲೇ ಹಲವು ವಿಭಾಗಗಳಿವೆ. ಆ ಪೈಕಿ ನಮಗೆ ಯಾವುದು ಇಷ್ಟವಾಗುತ್ತದೆಯೊ ಅದನ್ನು ಆಯ್ದುಕೊಳ್ಳಬಹುದು. ನಾವು ಜಾಸ್ತಿ ಓದಿಲ್ಲ ಬರೀ ಎಸ್ಸೆಸ್ಸೆಲ್ಸಿ ಅಂದರೆ ಅವರಿಗಾಗಿಯೇ ಡಿಪ್ಲೊಮಾ (ಕೃಷಿ) ಕೋರ್ಸ್ ಉಂಟು. ಇನ್ನು ಪಿಯುಸಿ ಆದವರಿಗೆ ಬಿ.ಎಸ್ಸಿ (ಅಗ್ರಿ), ಬಿ.ಎಸ್ಸಿ(ಅಗ್ರಿ ಮಾರ್ಕೆಟಿಂಗ್ ಮತ್ತು ಕೋ. ಆಪರೇಷನ್), ಬಿ.ಎಸ್ಸಿ (ಫಾರೆಸ್ಟ್ರಿ) ಇನ್ನು ಪದವಿ ಆದವರಿಗೆ ಎಂ.ಎಸ್ಸಿ(ಅಗ್ರಿ) ಎಂ.ಎಚ್.ಎಸ್ಸಿ, ಎಂ.ಎಸ್ಸಿ. (ಫಾರೆಸ್ಟ್ರಿ) ಸೇರಿದಂತೆ ಹಲವು ಕೋರ್ಸ್‌ಗಳಿವೆ.
ಎಲ್ಲೆಲ್ಲಿ ಕಲಿಕೆಗೆ ಅವಕಾಶ?
ಕೃಷಿ ಕೋರ್ಸ್ ಕಲಿಕೆಗೆ ಬೇಡಿಕೆಗೆ ಹೆಚ್ಚಿದಂತೆ ಅದನ್ನು ಕಲಿಸುವ ಕಾಲೇಜುಗಳ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚುತ್ತಿವೆ. ಧಾರವಾಡ, ರಾಯಚೂರು ಹಾಗೂ ಬೆಂಗಳೂರಲ್ಲಿ ಕೃಷಿ ವಿವಿಗಳಿವೆ. ರಾಜ್ಯದ ಬಹುತೇಕ ಜಿಲ್ಲೆಯಲ್ಲೂ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕೋರ್ಸ್ ಕಲಿಸುವ ಕಾಲೇಜುಗಳಿವೆ. ಹೀಗಾಗಿ ಕೃಷಿ ಕೋರ್ಸ್ ಕಲಿಯಲು ಅವಕಾಶ ಹಿಂದೆಂದಿಗಿಂತ ಹೆಚ್ಚು.
ಅರ್ಹತೆಗಳೇನು?
ಪ್ರತಿಯೊಂದು ಕೋರ್ಸ್ ಕಲಿಯಲು ನಿಗದಿತ ವಿದ್ಯಾರ್ಹತೆಗಳಿವೆ. ಜತೆಗೆ ಪ್ರವೇಶ ಶುಲ್ಕ ಇರುತ್ತದೆ. ನಿರ್ದಿಷ್ಟ ಸೀಟುಗಳಿರುತ್ತವೆ. ಜತೆಗೆ ಸ್ಪರ್ಧೆಯೂ ಹೆಚ್ಚು. ಕೆಲವು ಕೋರ್ಸ್‌ಗಳಿಗೆ ಸಿಇಟಿ ಇದೆ. ಇತ್ತೀಚೆಗೆ ಕೆಲವು ಕೋರ್ಸ್‌ಗಳನ್ನು ಅಂಚೆ ತೆರೆಪಿನ ಶಿಕ್ಷಣದ ಮೂಲಕ ಕಲಿಯಬಹುದು. ಇದರಿಂದ ನಿಗದಿತವಾಗಿ ಕಾಲೇಜಿಗೆ ಹೋಗಲು ಆಗದಿರುವವರಿಗೆ ಇದು ಸಾಕಷ್ಟು ಪ್ರಯೋಜನಕಾರಿ.
ನಿಮಗೂ ಕೃಷಿ ಶಿಕ್ಷಣ ಕಲಿಯಬೇಕೆಂಬ ಆಸೆಯೇ? ಹಾಗಾದರೆ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಬೆಂಗಳೂರು, ಫೋ. 080- 23330153 ಅಥವಾ ಸಮೀಪದ ಕೃಷಿ ಸಂಬಂಧಿತ ಕಾಲೇಜನ್ನು ಸಂಪರ್ಕಿಸಬಹುದು.
- 5 - ಭಾರತದಲ್ಲಿ ಪ್ರತಿ ರೈತ ಇಷ್ಟು ಸರಾಸರಿ ಎಕರೆ ಜಮೀನು ಹೊಂದಿದ್ದಾನೆ.
- 35 - ಪ್ರಪಂಚದ ಒಟ್ಟು ಸೋಯಾಬೀನ್‌ನಲ್ಲಿ ಇಷ್ಟು ಶೇಕಡಾವನ್ನು ಅಮೆರಿಕವೇ ಉತ್ಪಾದಿಸುತ್ತದೆ.
- 19 - 2010ರಲ್ಲಿ ಚೀನಾ ಒಂದು ಹೆಕ್ಟೇರ್‌ಗೆ ಇಷ್ಟು ಟನ್ ಭತ್ತ ಬೆಳೆದು ದಾಖಲೆ ನಿರ್ಮಿಸಿತ್ತು.
- 750 - ಒಂದು ಎಕರೆಯಲ್ಲಿ ಇಷ್ಟು ಗರಿಷ್ಠ ಕಾಫಿ ಗಿಡಗಳನ್ನು ನೆಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

