ಕೃಷಿ ಸಂಗಮ
ರೈತರು ಬದಲಾವಣೆಗೆ ತೆರೆದುಕೊಳ್ಳಲು ಕೃಷಿ ಮೇಳಗಳು ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಮೇಳದಲ್ಲಿ ಕಾಣಸಿಗುವ ಹೊಸಹೊಸ ತಂತ್ರಜ್ಞಾನ ಆಧಾರಿತ ...

ರೈತರು ಬದಲಾವಣೆಗೆ ತೆರೆದುಕೊಳ್ಳಲು ಕೃಷಿ ಮೇಳಗಳು ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಮೇಳದಲ್ಲಿ ಕಾಣಸಿಗುವ ಹೊಸಹೊಸ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳು, ಬೀಜ, ಗೊಬ್ಬರ ಸೇರಿದಂತೆ ಹಲವು ನಮೂನೆಯ ಮಾಹಿತಿಯು ಒಂದೇ ಸೂರಿನಲ್ಲಿ ಲಭ್ಯವಾಗುತ್ತವೆ. ಹೀಗಾಗಿಯೇ ಕೃಷಿ ವಿವಿಗಳು ಮೇಳಗಳನ್ನು ಆಯೋಜಿಸುತ್ತವೆ. ಅದೇ ರೀತಿ ಬೆಂಗಳೂರಿನ ಕೃಷಿ ವಿವಿ ಹಲವು ವರ್ಷಗಳಿಂದ ಕೃಷಿ ಮೇಳ ಆಯೋಜಿಸುತ್ತಾ ಬಂದಿದೆ. ಈ ಬಾರಿ ಮತ್ತೊಂದು ದಾಪುಗಾಲು ಇಟ್ಟಿದೆ. ಅದೇನಪ್ಪಾ ಅಂದ್ರೆ ಈ ಸಲ ಕೃಷಿ ವಿವಿ ಸುವರ್ಣ ಮಹೋತ್ಸವ ಪ್ರಯುಕ್ತ ಅಂತಾರಾಷ್ಟ್ರೀಯ ಮಟ್ಟದ ಮೇಳ ಆಯೋಜಿಸಿದೆ. ಇದರಿಂದ ರೈತರಿಗೆ ಮಾಹಿತಿಯ ಹಬ್ಬದೂಟವೇ ಸಿಗಲಿದೆ.
ನ. 7ರಿಂದ 11 ರವರೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 'ಕೃಷಿ ಸಂಗಮ' ತೆರೆದುಕೊಳ್ಳಲಿದೆ. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಳದಲ್ಲಿ ಒಟ್ಟು 800 ಮಳಿಗೆಗಳನ್ನು ತೆರೆಯಲಾಗುತ್ತದೆ. ಅಂದಾಜು 20 ಲಕ್ಷ ಜನರು ಮೇಳ ವೀಕ್ಷಣೆಗೆ ಆಗಮಿಸುವ ಸಾಧ್ಯತೆ ಇದೆ.
ಏನೇನುಂಟು?
ಬೆಂಗಳೂರು ಕೃಷಿ ವಿವಿ ಹೊಸದಾಗಿ ಆವಿಷ್ಕರಿಸಿದ ತಳಿಗಳು, ನವ- ನವೀನ ತಂತ್ರಜ್ಞಾನ ವೀಕ್ಷಣೆಗೆ ಅವಕಾಶ ಸಿಗಲಿದೆ. ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳು, ಉದ್ದಿಮೆಗಳು ಅಭಿವೃದ್ಧಿಪಡಿಸಿದ ಯಂತ್ರೋಪಕರಣಗಳ ಪ್ರದರ್ಶನವಿರುತ್ತದೆ.
ಸಾಧಕರಿಗೆ ಪ್ರಶಸ್ತಿ
ಮೇಳದಲ್ಲಿ ಹಲವರು ಕೃಷಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕೃಷಿ ವ್ಯಾಪ್ತಿಯ ಜಿಲ್ಲೆಗಳಲ್ಲಿನ 20 ಕೃಷಿಕರಿಗೆ ಪ್ರಶಸ್ತಿ, ರಾಜ್ಯಮಟ್ಟದ ಡಾ. ಎಚ್. ಮರೀಗೌಡ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ, ಕಾರ್ಪೋರೇಷನ್ ಪ್ರಾಯೋಜಿತ ಕಾರ್ಪ್ ಪ್ರಶಸ್ತಿ, ಅತ್ಯುತ್ತಮ ರೈತ, ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವಿಜ್ಞಾನಿಗಳ ದಂಡು
ಮೇಳಕ್ಕೆ ರಾಜ್ಯ, ಹೊರ ರಾಜ್ಯದ ಕೃಷಿಕರು ಮಾತ್ರವಲ್ಲದೆ ಹೊರದೇಶಗಳ ವಿಜ್ಞಾನಿಗಳು, ಪ್ರಗತಿಪರ ರೈತರು ಭಾಗವಹಿಸುತ್ತಾರೆ. ಜತೆಗೆ ರೈತರು ಎದುರಿಸುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆ ಕುರಿತು ಚರ್ಚಾಗೋಷ್ಠಿ ಆಯೋಜಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೇಳ ಆಯೋಜನಾ ಸಮಿತಿ ಅಧ್ಯಕ್ಷ ಡಾ. ಎನ್. ನಾಗರಾಜ್ (09449866904) ಮತ್ತು ಮಾಹಿತಿ ವಿಭಾಗದ ಡಾ. ಎಲ್. ರಾಮಕೃಷ್ಣರಾವ್ (09986663132) ಅವರನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


