ಕುಸುಬೆ
ರಾಜ್ಯದ ಎಣ್ಣೆ ಬೆಳೆಗಳಲ್ಲಿ ಕುಸುಬೆ ಪ್ರಮುಖವಾದದ್ದು. ಆದರೆ, ಇತ್ತೀಚೆಗೆ ಇದನ್ನು ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಹೆಚ್ಚು ...

ರಾಜ್ಯದ ಎಣ್ಣೆ ಬೆಳೆಗಳಲ್ಲಿ ಕುಸುಬೆ ಪ್ರಮುಖವಾದದ್ದು. ಆದರೆ, ಇತ್ತೀಚೆಗೆ ಇದನ್ನು ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಹೆಚ್ಚು ಜೀವಂತವಾಗಿರುವುದು ಖುಷಿಯ ಸಂಗತಿ. ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಫಲವತ್ತತೆ ಕಡಿಮೆ ಇರುವ ಮಣ್ಣಲ್ಲಿ ಬೆಳೆಯುತ್ತದೆ. ಹಾಗಾಗಿ ಬರಕ್ಕೆ ವರ ಎಂದು ಕರೆದರೆ ಅತಿಶೋಯುಕ್ತಿ ಆಗಲಾರದು.
ಬೆಳೆಯುವ ವಿಧಾನ
ಇದನ್ನು ಏಕ ಬೆಳೆಯಾಗಿ ಮತ್ತು ಇತರ ಸಮ್ಮಿಶ್ರ ಬೆಳೆಯಾಗಿ ಬೆಳೆಯಬಹುದು. ಅದು ಅವರವರ ಅನುಕೂಲ. ಜಮೀನನ್ನು ಉಳುಮೆ ಮಾಡಿ ಅಗತ್ಯಕ್ಕೆ ತಕ್ಕಷ್ಟು ತಿಪ್ಪೆ ಗೊಬ್ಬರ ಹಾಕಿ ಹದಗೊಳಿಸಿದ ನಂತರ ಕುಸುಬೆಯನ್ನು ಕೂರಿಗೆಯಿಂದ ಬಿತ್ತನೆ ಮಾಡಬೇಕು. ಸಾಲಿನಿಂದ ಸಾಲಿಗೆ 2 ಅಡಿ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 6 ಇಂಚು ಅಂತರವಿದ್ದರೆ ಸಾಕು. ಬೀಜ ಬಿತ್ತಿದ 8- 10 ದಿನದೊಳಗೆ ಮೊಳಕೆಯೊಡೆದು ಸಸಿ ಹೊರಗೆ ಬರುತ್ತದೆ. ನಂತರ ಒಮ್ಮೆ ಸಾಲು (ಯಡೆ ಹೊಡೆಯುವುದು) ಮಾಡಬೇಕು. ಒಂದು ಬಾರಿ ಕಳೆ ತೆಗೆದರೆ ಉತ್ತಮ. ಬಿತ್ತಿದ 90 ದಿನದೊಳಗೆ ಫಸಲು ಕೈಗೆ ಬರುತ್ತದೆ. ಇನ್ನು ಕುಸುಬೆ ಸೊಪ್ಪನ್ನು ಪಲ್ಲೆ ಮಾಡಲು ಬಳಸುತ್ತಾರೆ. ಬಿತ್ತನೆಗೆ ಸೆಪ್ಟೆಂಬರ್- ಅಕ್ಟೋಬರ್ ಸಕಾಲ.
ಮಣ್ಣು
ಸಾಮಾನ್ಯವಾಗಿ ಕಪ್ಪು ಮಣ್ಣು ಇದಕ್ಕೆ ಹೇಳಿ ಮಾಡಿಸಿದ್ದು, ಉಳಿದಂತೆ ಕೆಂಪು ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಸೇರಿದಂತೆ ಎಲ್ಲ ನಮೂನೆಯ ಮಣ್ಣಿನಲ್ಲಿ ಬೆಳೆಯಬಹುದು.
ಕೀಟ/ರೋಗಗಳು
ಇದಕ್ಕೆ ರೋಗಬಾಧೆ ಕಡಿಮೆ. ಆದರೂ ಕೆಲವೊಮ್ಮೆ ಕೊಳ್ಳೆರೋಗ, ಜಿಗಿಹುಳು, ನುಸಿ ಕಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ವೆಂಕನಗೌಡ ಪಾಟೀಲ್(ಮೊ. 9964729181) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


