ಕೃಷಿ-ಪರಿಸರ

ಮಿಸ್ಟರ್ ಸೋಯಾಬೀನ್

ಮಿಸ್ಟರ್ ಸೋಯಾಬೀನ್
Published On :

ಇದೊಂದು ಖಾದ್ಯ ಬೆಳೆ. ಇತ್ತೀಚೆಗೆ ಸೋಯಾಬೀನ್ ಎಣ್ಣೆಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸೋಯಾಬೀನ್ ಬೆಳೆಯಲು ರೈತರು ಜಾಸ್ತಿ ಉತ್ಸುಕತೆ ತೋರಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಇದನ್ನು ಬೆಳೆಯುತ್ತಾರೆ. ಇದನ್ನು ಬೆಳೆಯಲು ಜೂನ್ ತಿಂಗಳು ಪ್ರಶಸ್ತ. ಬೇರೆ ತಿಂಗಳಲ್ಲಿ ಬೆಳೆದರೆ ಇಳುವರಿ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಅಧಿಕ ಅಂತಾರೆ ಅನುಭವಿ ರೈತರು.

ಬೆಳೆಯುವ ವಿಧಾನ
ಇದನ್ನು ಮಳೆಯಾಶ್ರಿತವಾಗಿ ಹೆಚ್ಚು ಬೆಳೆಯುತ್ತಾರೆ. ಜಮೀನನ್ನು ಹದ ಮಾಡಿದ ಬಳಿಕ ಹೆಕ್ಟೇರ್‌ಗೆ 15ರಿಂದ 20 ಟನ್ ತಿಪ್ಪೆ ಗೊಬ್ಬರ ಹಾಕಬೇಕು. ನಂತರ 9 ಇಂಚು ಅಂತರದಲ್ಲಿ ಮತ್ತು ಒಂದೂವರೆ ಇಂಚು ಆಳದಲ್ಲಿ ಬೀಜ ನಾಟಿ ಮಾಡಬೇಕು. ಕಳೆ, ಕೀಟ, ರೋಗ ಬಾರದಂತೆ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು. ಬಿತ್ತಿದ 100 ದಿನಕ್ಕೆ ಇಳುವರಿ ಕೈಗೆ ಬರುತ್ತದೆ. ಒಂದು ಆರೋಗ್ಯವಂತ ಗಿಡ 300ರಿಂದ 350 ಕಾಯಿ ಬಿಡುತ್ತದೆ. ಚೆನ್ನಾಗಿ ನಿಯಂತ್ರಣ ಮಾಡಿದರೆ ಎಕರೆಗೆ 20ರಿಂದ 30 ಕ್ವಿಂಟಲ್ ಇಳುವರಿ ಪಡೆಯಬಹುದು.

ತಳಿಗಳು
ಎನ್‌ಆರ್‌ಸಿ- 37, ಗೋಲ್ಡ್ ಗ್ರೀನ್ ತಳಿಗಳು ಪ್ರಮುಖವಾಗಿವೆ.

ಮಣ್ಣು
ಕಪ್ಪು ಮಣ್ಣಿನಲ್ಲಿ ಉತ್ತಮ ಇಳುವರಿ ಬರುತ್ತದೆ. ಇತರೆ ಮಣ್ಣಲ್ಲಿ ಬೆಳೆಯಬಹುದು. ಆದರೆ, ಕಪ್ಪು ಮಣ್ಣಲ್ಲಿ ಬಂದಷ್ಟು ಇಳುವರಿ ಬರುವ ಸಾಧ್ಯತೆ ಕಮ್ಮಿ. ಮಣ್ಣಿನ ರಸಸಾರ 6.0ರಿಂದ 7.5 ಇದ್ದರೆ ಉತ್ತಮ. 20ರಿಂದ 30 ಸೆ. ಉಷ್ಣಾಂಶ ಇದ್ದರೆ ಉತ್ತಮ. 'ಸೋಯಾಬೀನನ್ನು ಬರೀ ಎಣ್ಣೆಗಾಗಿ ಮಾತ್ರವಲ್ಲದೇ ಹಾಲು, ಮೊಸರು ತಯಾರಿಸಲು ಬಳಸುತ್ತಾರೆ. ಉತ್ತಮ ಇಳುವರಿ ಪಡೆಯಬೇಕೆಂದರೆ ಜೂನ್‌ನಲ್ಲಿ ಬೆಳೆಯುವುದೇ ಉತ್ತಮ' ಅಂತಾರೆ ಬಾಲ್ಕಿ ತಾಲೂಕಿನ ಅಂಬೇಸಾಂಗವಿಯ ಬೆಳೆಗಾರ ಡಾ. ಧನರಾಜ್ (ಮೊ. 9742074707).

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.