ಕೃಷಿ-ಪರಿಸರ

ರಾಮಬಾಣ

ರಾಮಬಾಣ
Published On :

ಹಿಂಡೂಮನೆ ರಾಮಪ್ಪ ಅವರು ದೊಡ್ಡ ಜಮೀನ್ದಾರಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಕಾಲನ ಹೊಡೆತಕ್ಕೆ ಸಿಕ್ಕು ಬಹಳ ಜಮೀನುಗಳು ಗೇಣಿಯಲ್ಲಿ ಕೈಬಿಟ್ಟಿತು. ಇರುವುದನ್ನು ಸಹೋದರರಿಗೆ ಹಂಚಿ, ಪಾಲಿಗೆ ಬಂದ ಎರಡು ಎಕರೆಯಲ್ಲಿ ಸಂತೃಪ್ತ ಜೀವನ ಈಗ.
ಕೃಷಿಯೊಂದಿಗೆ ಸಮಾಜಕ್ಕೇನಾದರೂ ಉಳಿಸಿ ಹೋಗುವ ಯೋಚನೆ ಬಂದಾಗ ಹೊಳೆದಿದ್ದು ಊರ ಹೊರವಲಯದಲ್ಲೊಂದು ಔಷಧ ವನ.
ಸಾಗರ ತಾಲೂಕಿನ ಹೊಸಹಳ್ಳಿಯಲ್ಲಿ 1999ರಲ್ಲಿ 3 ಎಕರೆ ಜಮೀನಿನಲ್ಲಿ ಔಷಧ ಸಸ್ಯ ನೆಟ್ಟು ಅದಕ್ಕೆ 'ಭೂತೇಶ್ವರ ಔಷಧವನ'ವೆಂದು ನಾಮಕರಿಸಲಾಯಿತು. ಗ್ರಾಮಸ್ಥರ ಸಹಕಾರದೊಂದಿಗೆ ಹಾಗೂ ಅರಣ್ಯ ಇಲಾಖೆ ಕೊಡಮಾಡಿದ ಸ್ವಲ್ಪ ಹಣದೊಂದಿಗೆ ತಂತಿಬೇಲಿ ನಿರ್ಮಿಸಿ ಪ್ರಾರಂಭದಲ್ಲಿ 50 ಜಾತಿಯ ಸಸ್ಯ ನೆಡಲಾಯಿತು. ಇಂದು ಗಿಡಗಳ ಸಂಖ್ಯೆ 600ಕ್ಕೂ ಮೀರಿದೆಯೆಂದರೆ ಅದರ ವೈವಿಧ್ಯತೆ ನಿಮಗೆ ಅರಿವಾಗಬಹುದು.
ಏನೇನಿವೆ?
ಅಪರೂಪದ ಸಸ್ಯಗಳಾದ ಆನಂಗಿ, ಸರ್ಪಗಂಧ, ಏಕನಾಥ, ಏಕನಾಯಕ, ಬೇಲ, ಹಿಪ್ಪೆ, ರುದ್ರಾಕ್ಷಿ, ಕದಂಬ, ನಾಗಲಿಂಗ, ಭೂತನಾಥ, ಪುತ್ರಜೀವಿ, ರಕ್ತಚಂದನ, ಮರದರಿಶಿನ, ಕೆಂಪು ದೇವದಾರಿ, ಕೆಂಪು ಮತ್ತು ಬಿಳಿ ಮುರುಗಲು, ಬಿಳಿ ಹಾಲವಾಣ, ಬಿಳಿ ಮತ್ತಿಮರ ಹೀಗೆ ಔಷಧ ಸಸ್ಯಗಳ ಲೋಕವೇ ಅನಾವರಣಗೊಳ್ಳುತ್ತದೆ. ರಾಮಪ್ಪ ಅವರು ಸಸ್ಯಗಳಿಗೆ ಬೇಸಿಗೆಯಲ್ಲಿ ನೀರೆರೆಯುವುದು, ಬೇಲಿ ಸರಿಪಡಿಸಿ ಜಾನುವಾರುಗಳಿಂದ ರಕ್ಷಣೆ ಮಾಡುತ್ತಾರೆ. ಇದನ್ನು ಹಲವು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ.
ಕಾಡು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ರೀತಿಯ ಪ್ರಯತ್ನ ಪ್ರಶಂಸನೀಯ. ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಪ್ರೋತ್ಸಾಹ ದೊರೆತರೆ ಇದು ಸಮಾಜಕ್ಕೆ ಅತ್ಯುತ್ತಮ ಕೊಡುಗೆಯಾಗಬಲ್ಲದು.

-ಚೇತನಾ  ಹಿಂಡೂಮನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.