ಕೃಷಿ-ಪರಿಸರ

ಕಬ್ಬು

ಕಬ್ಬು
Published On :

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖ. ಇದನ್ನು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಮಂಡ್ಯ ಜಿಲ್ಲೆ ಸೇರಿದಂತೆ ಹಲವೆಡೆ ಬೆಳೆಯಲಾಗುತ್ತದೆ. ಇದು ಬಹುವಾರ್ಷಿಕ ಬೆಳೆ. ಹಾಗಾಗಿ ಇದರ ಮಧ್ಯ ಅಂತರ ಬೆಳೆಯಾಗಿ ಇತರ ಬೆಳೆಗಳನ್ನು ಬೆಳೆದು ಲಾಭ ಗಳಿಸಬಹುದು.

ಬೆಳೆಯುವ ವಿಧಾನ
ಮೊದಲು ಜಮೀನನ್ನು ಹದ ಮಾಡಬೇಕು. ಎಕರೆಗೆ 10 ಚಕ್ಕಡಿ ಗೊಬ್ಬರ ಹಾಕಬೇಕು. ಬಳಿಕ 2 ಅಡಿ ಅಂತರದಲ್ಲಿ ಕಬ್ಬಿನ ಬೀಜ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 8 ಅಡಿ ಅಂತರವಿರಬೇಕು. ಬೀಜ ನಾಟಿ ಮಾಡಿದ ಬಳಿಕ 15 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಇದರ ಮಧ್ಯ ಅಂತರ ಬೆಳೆಯಾಗಿ ಶೇಂಗಾ, ಉಳ್ಳಾಗಡ್ಡಿ, ಅಲಸಂದೆ, ಮೆಕ್ಕೆಜೋಳ, ಮೆಣಸಿನಕಾಯಿ, ಸೇವಂತಿ, ಚೆಂಡು ಹೂವು ಸೇರಿದಂತೆ ಇತರ ಬೆಳೆ ಬೆಳೆದು ಆದಾಯ ಗಿಟ್ಟಿಸಬಹುದು. ಕಬ್ಬಿನ ಮಧ್ಯ ದ್ವಿದಳ  ಧಾನ್ಯ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಜತೆಗೆ ಆದಾಯವೂ ಬರುತ್ತದೆ. ಕಬ್ಬು ನಾಟಿ ಮಾಡಿದ 10 ತಿಂಗಳು ಅಥವಾ ವರ್ಷ ತುಂಬುವುದರೊಳಗೆ ಕಟಾವಿಗೆ ಬರುತ್ತದೆ. ಕಾರ್ಖಾನೆ ಮತ್ತು ಧಾರಣೆ ಸ್ಥಿತಿಗತಿ ಅರಿತು ಕಟಾವು ಮಾಡುವುದು ಉತ್ತಮ. ಬೀಜ ಬಿತ್ತನೆಗೆ ನವೆಂಬರ್- ಡಿಸೆಂಬರ್ ಮತ್ತು ಮೇ- ಜೂನ್ ತಿಂಗಳು ಉತ್ತಮ. ಕಬ್ಬಿನಲ್ಲಿ ಪ್ರಮುಖವಾಗಿ 86, 36 ತಳಿಗಳಿವೆ. 

ರೋಗಗಳು
ಕೋರಿ ಹುಳು ಬಾಧೆ, ಕಾಂಡಕೊರಕ ಕೀಟ, ಬಿಳಿ ಉಣ್ಣೆ ರೋಗ ಪ್ರಮುಖವಾಗಿ ಬರುತ್ತದೆ. ಗೋಮೂತ್ರ ಸಿಂಪಡಿಸುವುದರಿಂದಲೂ ರೋಗ, ಕೀಟಬಾಧೆಯನ್ನೂ ನಿಯಂತ್ರಿಸಬಹುದು.

ಮಣ್ಣು
ಕಬ್ಬಿಗೆ ಕಪ್ಪು ಮಣ್ಣು ಉತ್ತಮ. ಇನ್ನುಳಿದಂತೆ ಮರಳು ಮಿಶ್ರಿತ ಕೆಂಪು ಮಣ್ಣು, ಮಸಾರೆ ಜಮೀನಿನಲ್ಲೂ ಬೆಳೆಯಬಹುದು.
ಹೆಚ್ಚಿನ ಮಾಹಿತಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಪ್ರಕಾಶ್ ಕೋಟಿನತೋಟ(ಮೊ. 9731942250) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.