ಅಗರ್‌ವುಡ್ ಆಶಾಕಿರಣ

ಜಾಸ್ತಿ ನಿರ್ವಹಣೆ ಬಯಸದ ಕಡಿಮೆ ಖರ್ಚಿನ, ಕಾರ್ಮಿಕರ ಅವಶ್ಯಕತೆ ಇಲ್ಲದ ಬೆಳೆ ಅಗರ್‌ವುಡ್. ಹೌದು, ಮಲೆನಾಡಿನಲ್ಲಿ ಮೆಲ್ಲನೆ ತಳವೂರುತ್ತಿರುವ ಅಗರ್‌ವುಡ್ ಬೆಳೆಯುವತ್ತ ಕೃಷಿಕರು ಆಸಕ್ತಿ ತೋರುತ್ತಿರುವುದು ಖುಷಿಯ ಸಂಗತಿ. ಇದನ್ನು ಕೇವಲ ಏಕಬೆಳೆಯಾಗಿ ಬೆಳೆಯದೇ ಅಡಕೆ, ತೆಂಗು, ಏಲಕ್ಕಿ ಮತ್ತು ಕಾಫಿ ಮಧ್ಯೆ ಅಂತರ್ ಬೆಳೆಯಾಗಿ ಬೆಳೆಯಬಹುದು.
ಬೆಳೆಯುವ ವಿಧಾನ
ಏಕಬೆಳೆಯಾಗಿ ಬೆಳೆಯುವುದಾದರೆ 9x9 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ಒಂದೂವರೆ ಅಡಿ ಆಳದ ಗುಂಡಿ ತೋಡಿ ಸಸಿ ನಾಟಿ ಮಾಡಿ ಆಗಾಗ ನೀರು, ಗೊಬ್ಬರ ಹಾಕಿದರೆ ಸಾಕು. ಇದಕ್ಕಿಂತ ಜಾಸ್ತಿ ನಿರ್ವಹಣೆ ಬಯಸದು. ರೋಗ, ಕೀಟ ಬಾಧೆಯಂತೂ ಅಗರ್‌ನತ್ತ ಸುಳಿಯದು. ಇದು ಹೆಚ್ಚು ತಂಪಾದ ಹವಾಮಾನ ಬಯಸುವುದರಿಂದ ಮಲೆನಾಡು, ಅರೆಮಲೆನಾಡು ಪ್ರದೇಶವೇ ಸೂಕ್ತ. ಸಾವಯವ ಅಂಶ ಹೆಚ್ಚಿರುವ ಮಣ್ಣು ಅಗರ್‌ವುಡ್‌ಗೆ ಹೇಳಿ ಮಾಡಿಸಿದ್ದು. ಅಂತರ್ ಬೆಳೆಯಾಗಿ ಬೆಳೆದರೆ ಎಕರೆಗೆ 200 ಸಸಿಗಳು ಬೇಕಾಗುತ್ತವೆ. ಏಕಬೆಳೆಯಾಗಿ ಬೆಳೆದರೆ ಎಕರೆಗೆ 450 ಗಿಡಗಳು ಬೇಕು. ದಕ್ಷಿಣ ಭಾರತದಲ್ಲಿ ಎ- 12 ತಳಿಯ ಅಗರ್‌ವುಡ್‌ಅನ್ನು ಬೆಳೆಯಲಾಗುತ್ತದೆ. ಅದೇ ರೀತಿ ಇದು ದೀರ್ಘಕಾಲಿಕ ಬೆಳೆಯಾಗಿರುವುದರಿಂದ ಇದರ ಮಧ್ಯೆ ಅಂತರ್ ಬೆಳೆ ಬೆಳೆದು ಲಾಭ ಗಳಿಸಬಹುದು. ಸಸಿ ನಾಟಿ ಮಾಡಿದ 10 ವರ್ಷದ ನಂತರ ಅಗರ್‌ವುಡ್ ಇಳುವರಿ ಕೈಗೆ ಸಿಗುತ್ತದೆ. ಸಸಿಗಳನ್ನು ಮಳೆಗಾಲದ ಯಾವ ತಿಂಗಳಲ್ಲಾದರೂ ನಾಟಿ ಮಾಡಬಹುದು.
ಉಪಯೋಗ
ಅಗರ್‌ವುಡ್‌ಅನ್ನು ಮುಖ್ಯವಾಗಿ ಅತ್ತರ್, ಅಗರಬತ್ತಿ, ಲೈಂಗಿಕ ಉದ್ದೀಪನ ಔಷಧ ಮತ್ತು ಸಾಬೂನು ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ.
ಅಗರ್‌ವುಡ್ ಬೆಳೆಯಬೇಕೆಂಬುವವರಿಗೆ ವನದುರ್ಗಿ ಅಗರ್‌ವುಡ್ ಇಂಡಿಯಾ ಲಿ. ಸಸಿಗಳನ್ನು ಪೂರೈಕೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಧರ್ಮೇಂದ್ರಕುಮಾರ್ (080-42066961) ಅಥವಾ ಅಗರ್‌ವುಡ್ ಬೆಳೆದು ಯಶಸ್ಸು ಕಂಡಿರುವ ಹೊಸನಗರ ತಾಲೂಕಿನ ತಾಳಲೆ ಗ್ರಾಮದ ಜೈಪ್ರಕಾಶ್ (9448900663) ಅವರನ್ನು ಸಂಪರ್ಕಿಸಬಹುದು. ಮಾರುಕಟ್ಟೆ ಅಗತ್ಯತೆ ನೋಡಿಕೊಂಡು ಬೆಳೆಯುವುದು ಉತ್ತಮ.
- ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


