ತೊಗರಿ

ತೊಗರಿ ಬೆಳೆಗಾರರು ಕೀಟಬಾಧೆಯಿಂದ ಕಂಗಾಲಾಗಿದ್ದಾರೆ. ಆದರೆ, ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಟಗಾದ ಮಹಾದೇವಪ್ಪ ಡಿಗ್ಗಿ ಕೀಟಬಾಧೆಗೆ ನಿಯಂತ್ರಣ ಕ್ರಮ ಕೈಗೊಂಡು ವಿಶಿಷ್ಟ ಸಾಧನೆ ಮಾಡಿದ್ದಾರೆ.
ತೊಗರಿ ಬೆಳೆ ಇನ್ನೇನು ಕೈಗೆ ಬಂತು ಅನ್ನೋದರಲ್ಲಿ ಮೊಗ್ಗು ಉದುರುವುದು, ಕಾಳು ಜೊಳ್ಳಾಗುವುದು ಮೊದಲಾದ ಸಮಸ್ಯೆಗಳು ಕಾಡುವುದುಂಟು. ಅಲ್ಲದೆ ಹಸಿರು, ಬೀಡಿ ಹುಳುಗಳು ತೊಗರಿಯನ್ನು ನಾಶ ಮಾಡಬಲ್ಲವು. ಹೀಗಾಗಿ ಬೆಳೆ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸ. ರೈತ ಮಹಾದೇವಪ್ಪ ಇಂಥ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಮುಖ್ಯವಾಗಿ ಜೋಂಡಿ (ಜಾಡಮಿ) ಎಂಬ ಕಾಯಿ ಕೊರೆಯುವ ಕೀಟ ಬಾಧೆಯಿಂದ ಬೇಸತ್ತು ಹೋಗಿದ್ದರು. ಮುಂದೇನು ಮಾಡೋದು ಅನ್ನೋ ಚಿಂತೆ ಅವರ ಮನದಲ್ಲಿ ಕೊರೆಯುತ್ತಿತ್ತು. ಆಗ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದೇ ಡುಪಾಂಟ್ ಕೊರಾಜೆನ್ ಕೀಟನಾಶಕ. ಇದರಿಂದ ತಮ್ಮ 80 ಎಕರೆ ತೊಗರಿ ಭೂಮಿಯಲ್ಲಿ ಹಿಂದೆಂದಿಗಿಂತ ಅಧಿಕ ಇಳುವರಿ ಪಡೆದಿದ್ದಾರೆ.
ಪರಿಣಾಮಕಾರಿ ಹೇಗೆ?
ಕೊರಾಜೆನ್ ಕೀಟನಾಶಕವು ತೊಗರಿಯಲ್ಲಿ ಕಂಡುಬರುವ ಕಾಯಿಕೊರಕ ಕೀಟ, ನೊಣಗಳನ್ನು ನಿಯಂತ್ರಿಸುತ್ತದೆ. ಇದು ದೀರ್ಘ ಕಾಲದವರೆಗೆ ಕೀಟಗಳನ್ನು ನಿಯಂತ್ರಿಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ. ಅಲ್ಲದೆ, ಪರಿಶ್ರಮ, ಸಮಯದ ಉಳಿತಾಯವಾಗುತ್ತದೆ. ಹೊಸ ಚಿಗುರಿಗೂ ರಕ್ಷಣೆ ನೀಡಿ ವಿಭಿನ್ನ ಹವಾಮಾನದಲ್ಲೂ ಉತ್ತಮ ಕೆಲಸ ಮಾಡುತ್ತದೆ. ಇದರಿಂದ ಸಹಜವಾಗಿ ಇಳುವರಿ ಹೆಚ್ಚುತ್ತದೆ ಅಂತಾರೆ ರೈತ ಮಹದೇವಪ್ಪ.
ಭರ್ಜರಿ ಲಾಭ
ಡುಪಾಂಟ್ ಕೊರಾಜೆನ್ ಔಷಧಿಯನ್ನು ಪ್ರತಿ ಎಕರೆಗೆ 60 ಮಿ.ಮೀ.ನಂತೆ ಉಪಯೋಗಿಸಬೇಕು. ಮಹಾದೇವಪ್ಪ ಅವರು ಪ್ರತಿವರ್ಷ 80 ಎಕರೆ ಜಮೀನಲ್ಲಿ ತೊಗರಿ ಬೆಳೆಯುತ್ತಿದ್ದರು. 2010ರಲ್ಲಿ ಕೊರಾಜೆನ್ ಔಷಧಿ ಬಳಸತೊಡಗಿದರು. ಎಕರೆಗೆ 320 ಚೀಲ ಬರುತ್ತಿದ್ದ ಇಳುವರಿ 440 ಚೀಲಕ್ಕೆ ಏರಿಕೆಯಾಯಿತು. ಹೆಚ್ಚಿನ ಮಾಹಿತಿಗೆ ಮಹಾದೇವಪ್ಪ ಡಿಗ್ಗಿ (ಮೊ.9880872159) ಅವರನ್ನು ಸಂಪರ್ಕಿಸಬಹುದು.
ಬಾಧೆ ಕಡಿಮೆಯಾಗಿದೆ...
ಮೊದಲು 10 ಎಕರೆಯಲ್ಲಿ ಕೊರಾಜೆನ್ ಬಳಸಿದೆ. ಇದರಿಂದ ತೊಗರಿಗೆ ಬರುವ ಹಸಿರು ಹುಳು, ಬೀಡಿ ಹುಳು ಬಾಧೆ ಕಡಿಮೆಯಾಯಿತು. ಈ ವರ್ಷವೂ 70 ಎಕರೆಯಲ್ಲಿ ಕೊರಾಜೆನ್ ಬಳಸಿದ್ದೇನೆ. ಇದರಿಂದ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಹೂವುಗಳ ಸಂಖ್ಯೆಯೂ ಅಧಿಕವಾಗಿದೆ.
- ಮಹಾದೇವಪ್ಪ ಡಿಗ್ಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


