ಕೃಷಿ-ಪರಿಸರ

ಚೆಂಡು ಎಂದರೆ ಚೆಂಡೂ....

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದ ರೈತ ವೀರಭದ್ರಪ್ಪ ಮೆಕ್ಕೆಜೋಳದ ಹೊಲದ ನಡುವೆ ಚೆಂಡು ಹೂ ಗಿಡಗಳನ್ನು ಬೆಳೆದಿದ್ದಾರೆ.

ಚೆಂಡು ಎಂದರೆ ಚೆಂಡೂ....
Published On :

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದ ರೈತ ವೀರಭದ್ರಪ್ಪ ಮೆಕ್ಕೆಜೋಳದ ಹೊಲದ ನಡುವೆ ಚೆಂಡು ಹೂ ಗಿಡಗಳನ್ನು ಬೆಳೆದಿದ್ದಾರೆ. ಆ ಮೂಲಕ ಕಡಿಮೆ ವೆಚ್ಚದಲ್ಲಿ ಉಪ ಕೃಷಿಯಿಂದ ಆದಾಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಳೆಗಾಲದ ಆರಂಭದಲ್ಲಿ ಮೆಕ್ಕೆಜೋಳದ ಕೃಷಿ ಆರಂಭಿಸಿದರು. ಹೊಲವನ್ನು ಟ್ರ್ಯಾಕ್ಟರ್‌ನಿಂದ ಹದಗೊಳಿಸಿ ಸಾಲು ಮಾಡಿದರು. ಮೆಕ್ಕೆಜೋಳ ಖರೀದಿ, ಗೊಬ್ಬರ ನೀಡುವಿಕೆ ಇತ್ಯಾದಿಗಳಿಗೆ ಸಾಕಷ್ಟು ವೆಚ್ಚ ಮಾಡಿದರು. ಮೆಕ್ಕೆಜೋಳ ಫಸಲು ಬಲಿತು ಮಾರಾಟಕ್ಕೆ ಸಿದ್ಧಗೊಳ್ಳಲು ಡಿಸೆಂಬರ್- ಜನವರಿವರೆಗೆ ಕಾಯಬೇಕು. ಅಲ್ಲಿಯವರೆಗೆ ಮನೆಯ ಇತರ ವೆಚ್ಚಗಳಿಗೆ ಆದಾಯ ಗಳಿಸುವ ಬಗ್ಗೆ ಯೋಚಿಸಿದರು. ಅದಕ್ಕಾಗಿ ಅವರಿಗೆ ಚೆಂಡು ಹೂವಿನ ಸಸಿಗಳನ್ನು ಈ ಮೆಕ್ಕೆಜೋಳದ ಹೊಲದ ನಡುವೆ ಬೆಳೆಯಲು ಉಪಾಯ ಹೊಳೆಯತು. ಅದಕ್ಕಾಗಿ ಮೆಕ್ಕೆಜೋಳದ ಸಸಿ ಮೊಳೆತು 25 ದಿನವಾಗುತ್ತಿದ್ದಂತೆ ಚೆಂಡು ಹೂವಿನ ಬೀಜ ಬಿತ್ತಿದರು.

3 ಅಡಿ ಸಸಿ
ಈಗ ಚೆಂಡು ಹೂವಿನ ಸಸಿಗಳು 50 ದಿನದಿಂದ ಹೂವಿನ ಫಸಲು ನೀಡಲು ಆರಂಭಿಸಿದೆ. ಮೆಕ್ಕೆಜೋಳಕ್ಕೆ ಕಾಂಪ್ಲೆಕ್ಸ್ ಗೊಬ್ಬರವನ್ನು ಒಮ್ಮೆ ಮಾತ್ರ ಪ್ರತಿ ಗಿಡಕ್ಕೆ 10 ಗ್ರಾಂನಷ್ಟು ನೀಡಿದ್ದರು. ಚೆಂಡು ಹೂ ಸಸಿಗಳು ಹುಲುಸಾಗಿ ಬೆಳೆದು 3 ಅಡಿಯಷ್ಟು ಎತ್ತರ ಬೆಳೆದುನಿಂತಿವೆ. ಇವರು ಒಟ್ಟು 600 ಚೆಂಡು ಹೂವಿನ ಸಸಿ ಬೆಳೆಸಿದ್ದಾರೆ. ಪ್ರತಿ ಗಿಡದಿಂದ ಸರಾಸರಿ ಅರ್ಧ ಕೆಜಿ ಚೆಂಡು ಹೂವಿನ ಫಸಲು ದೊರೆಯುತ್ತಿದೆ. ಮಹಾಲಯ ಅಮವಾಸ್ಯೆ, ದಸರಾ ಪಾಡ್ಯದಿಂದ ದಶಮಿವರೆಗೆ ವಾಹನ ಪೂಜೆ ಇತ್ಯಾದಿಗಳಿಗೆ ಚೆಂಡು ಹೂವಿಗೆ ಸಾಕಷ್ಟು ಬೇಡಿಕೆ. ಕೆಜಿಗೆ 50 ರಿಂದ 60ರವರೆಗೂ ಧಾರಣೆ. ಈವರೆಗೆ ಇವರಿಗೆ 2 ಕ್ವಿಂಟಲ್‌ನಷ್ಟು ಚೆಂಡು ಹೂವು ದೊರೆತಿದೆ. ರು. 10 ಸಾವಿರ ಆದಾಯ ದೊರೆತಿದೆ. ಮಾಹಿತಿಗಾಗಿ ಮೊ. 9740295466.

- ಕಲಾವತಿ ಹೆಗಡೆ ಆನಂದಪುರಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.