ಕೃಷಿ-ಪರಿಸರ

ನನ್ನ ಹೆಸರು!

ನನ್ನ ಹೆಸರು!
Published On :

ದ್ವಿದಳ ಧಾನ್ಯಗಳಲ್ಲಿ ಹೆಸರು ಪ್ರಮುಖವಾದದ್ದು. ಇದನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಶ್ರಿತವಾಗಿ ಹೆಚ್ಚು ಬೆಳೆಯುತ್ತಾರೆ. ಈ ಬೆಳೆಯು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಸಹಕಾರಿ ಎಂಬುದು ಗಮನಾರ್ಹ. ಹೆಸರಿನಲ್ಲಿ ಕಬ್ಬಿಣಾಂಶ, ವಿಟಮಿನ್ 'ಎ' ಅಧಿಕವಿರುತ್ತದೆ.
ಹೆಸರು ಅಲ್ಪಾವಧಿ ಬೆಳೆ. ಅಂದರೆ ಬಿತ್ತಿದ ಮೂರು ತಿಂಗಳಲ್ಲಿ ಫಸಲು ಬರುತ್ತದೆ. ಇದರ ಜತೆಗೆ ಅಂತರ್ ಬೆಳೆಗಾಗಿ ಹಲವಾರು ಬೆಳೆಗಳನ್ನು ಬೆಳೆಯಬಹುದು. ಮೇ ತಿಂಗಳು ಹೆಸರು ಬಿತ್ತನೆಗೆ ಸೂಕ್ತ.
ಬೆಳೆಯುವ ವಿಧಾನ
ಮೊದಲು ಜಮೀನನ್ನು ಚೆನ್ನಾಗಿ ಹರಗಿ ಕಸ- ಕಡ್ಡಿ, ಹೆಂಟೆಗಳಿಲ್ಲದ್ದಂತೆ ಹಸನು ಮಾಡಬೇಕು. ನಂತರ ಅಗತ್ಯಕ್ಕನುಗುಣವಾಗಿ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬಳಿಕ ಬೀಜವನ್ನು ನಿರ್ದಿಷ್ಟ ಅಂತರದಲ್ಲಿ ನಾಟಿ ಮಾಡಬೇಕು. ಬೀಜ ಬಿತ್ತಿದ ಒಂದು ತಿಂಗಳ ಒಳಗೆ ಯಡೆ (ಸಾಲು ಮಾಡುವುದು) ಹೊಡೆಯಬೇಕು. ಹೀಗೆ ಮಾಡುವುದರಿಂದ ಗಿಡ ಚೆನ್ನಾಗಿ ಬೆಳೆಯಲು, ಕಳೆ ಹೋಗಲಾಡಿಸಲು ಸಹಕಾರಿಯಾಗುತ್ತದೆ. ಜಾಸ್ತಿ ನಿರ್ವಹಣೆ ಕೆಲಸ ಬಯಸದು. ನಾಟಿ ಮಾಡಿದ 2 ತಿಂಗಳ ಬಳಿಕ ಹೂವು, ಹೀಚು ಬಿಡಲು ಶುರುಮಾಡುತ್ತದೆ. ಮೂರು ತಿಂಗಳಾದ ಮೇಲೆ ಕಾಯಿ ಬಲಿಯಲು ಶುರುಮಾಡುತ್ತದೆ. ಹೆಸರು ಕಾಳಿನ ಸಿಪ್ಪೆಯು ಒಣಗಿ ಕಪ್ಪಾದರೆ ಕಟಾವಿಗೆ ಬಂದಿದೆ ಎಂದೇ ಅರ್ಥ.
ಮಣ್ಣು
ಹೆಸರನ್ನು ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು. ಆದರೂ ಕಪ್ಪು, ಕೆಂಪು ಮಣ್ಣಲ್ಲಿ ಇಳುವರಿ ಹೆಚ್ಚು ಬರುತ್ತದೆ.
ತಳಿಗಳು
ರಾಜ್ಯದಲ್ಲಿ ಹೆಚ್ಚಾಗಿ ಸ್ಥಳೀಯ ತಳಿಯ ಹೆಸರೇ ಹೆಚ್ಚು ಚಾಲ್ತಿಯಲ್ಲಿದೆ. ಇತ್ತೀಚೆಗೆ ಪೂಸಾ ಬೈಸಾಕಿ, ಐಎಸ್- 16, ಪಿಡಿಎಂ- 84 ಬಳಕೆಯಲ್ಲಿವೆ.
ರೋಗಗಳು
ಹೆಸರಿಗೆ ರೋಗ ಹಾವಳಿ ತುಸು ಹೆಚ್ಚು. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡದಿದ್ದರೆ ಇಳುವರಿ ಕುಂಠಿತವಾಗುವ ಸಾಧ್ಯತೆ ಅಧಿಕ. ಬೂದಿರೋಗ, ಎಲೆಚುಕ್ಕೆ ರೋಗ, ಹಳದಿ ನಂಜುರೋಗ, ಎಲೆ ತಿನ್ನುವ ಕೀಟ, ಕಾಯಿಕೊರಕ, ಸಸ್ಯ ಹೇನು, ನುಸಿ, ಥ್ರಿಪ್ಸ್ ಮೊದಲಾದ ಕೀಟ ಬಾಧೆ ಬರಬಹುದು.

-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.