ಆಹಾ! ರಾಮ

ರಾಮಫಲವು ಸೀತಾಫಲದ ಜಾತಿಗೆ ಸೇರಿದ ಹಣ್ಣು. ಇದರಲ್ಲಿ ಬೀಜ ಇರಲ್ಲ. ಸೀತಾಫಲ ಗಿಡ, ಇದು ಮರ. ಕಾಂಡ, ಎಲೆ, ಹೂವು, ಹಣ್ಣು ಎಲ್ಲವೂ ಗಾತ್ರದಲ್ಲಿ ಅದಕ್ಕಿಂತ ದೊಡ್ಡದು. ಗಟ್ಟಿ ಮೊಸರಿನಂತೆ ಸಿಹಿಯಾದ ತಿರುಳು ಸಮೃದ್ಧ. ಇದರ ವೈಜ್ಞಾನಿಕ ಹೆಸರು ಅನ್ನೋನಾ ರೆಟಿಕ್ಯುಲಾಟ.
ಮೂಲ ಸ್ಥಾನ
ದ. ಅಮೆರಿಕ, ವೆಸ್ಟ್‌ಇಂಡೀಸ್ ಇದರ ಮೂಲ ಸ್ಥಾನ. ಈಗ ಪ್ರಪಂಚದೆಲ್ಲೆಡೆ ಕಂಡುಬರುತ್ತಿದೆ. 4.5 ಮೀಟರ್‌ದಿಂದ 10 ಮೀ. ಸುತ್ತಳತೆಯಲ್ಲಿ ಹರಡಿಕೊಳ್ಳುವ ಈ ಮರ 15 ರಿಂದ 30 ಅಡಿ ಎತ್ತರ ಬೆಳೆಯುತ್ತದೆ. ಸರಿಯಾಗಿ ಆರೈಕೆ ಮಾಡಿದಲ್ಲಿ ಬೀಜ ನೆಟ್ಟು ನಾಲ್ಕು ವರ್ಷದಲ್ಲೇ ಫಲ ಕೊಡಲಾರಂಭಿಸುತ್ತದೆ. ಹೂವು ದಪ್ಪವಾದ ಮೂರು ದಳ ಹೊಂದಿದ್ದು, ತಿಳಿಹಸಿರು- ಹಳದಿ ಬಣ್ಣದಿಂದಿದ್ದು, ಕೆಳಮುಖದಲ್ಲಿ ನೇತಾಡುತ್ತಿರುತ್ತದೆ. ಪೂರ್ಣ ಅರಳುವುದಿಲ್ಲ. ಬಹುತೇಕ ಜುಲೈ- ಆಗಸ್ಟ್‌ನಲ್ಲಿ ಹೂವು ಬಿಟ್ಟರೆ ನವೆಂಬರ್- ಡಿಸೆಂಬರ್‌ನಲ್ಲಿ ಫಲ ನೀಡಲಾರಂಭಿಸುತ್ತದೆ. ಹಣ್ಣು ಹಳದಿ ಮಿಶ್ರಿತ ಕೆಂಪು ಬಣ್ಣವಿರುತ್ತದೆ. 5- 6 ತಿಂಗಳವರೆಗೂ ಹಣ್ಣು ಸಿಗುತ್ತದೆ.
ಬೇಗ ಕೆಡಲ್ಲ
ಹಣ್ಣು ಕಿತ್ತ ಮೇಲೆ 2- 4 ದಿನಗಳವರೆಗೂ ಕೆಡದೆ ಉಳಿಯುತ್ತದೆ. ಆರೈಕೆ ಸರಿಯಾಗಿ ಮಾಡಿದಲ್ಲಿ ಒಂದು ಮರ 40- 50 ಕೆಜಿಯಷ್ಟು ಹಣ್ಣು ನೀಡುತ್ತದೆ. 10- 15 ವರ್ಷದ ಮರ 250- 300 ಹಣ್ಣು ನೀಡಿದ ಉದಾಹರಣೆಯೂ ಉಂಟು.
ಪೋಷಕಾಂಶ ಗಣಿ
ಮಳೆಗಾಲದ ಪ್ರಾರಂಭದಲ್ಲಿ ಹಟ್ಟಿಗೊಬ್ಬರ, ಬೂದಿಗೊಬ್ಬರ, ಸಾವಯವ ಗೊಬ್ಬರದ ಮಿಶ್ರಣ ಹದ ನೋಡಿ ಹಾಕಿದರೆ ಮರ ಅಧಿಕ ಫಸಲು ಕೊಡುತ್ತದೆ. ಹಣ್ಣು ಶರೀರಕ್ಕೆ ಅವಶ್ಯಕವಾದ ಹಲವು ಪೋಷಕಾಂಶ, ತೇವಾಂಶ ಹೊಂದಿದೆ. ಬೀಜ ಕಂದುಕಪ್ಪು ಬಣ್ಣದ್ದಿರುತ್ತದೆ. ಇದರ ಬೀಜದಿಂದ ಸಸಿ ಮಾಡಬಹುದು. ಕಸಿ ಕಟ್ಟುವುದರಿಂದಲೂ ಮಾಡಬಹುದು. ಸಸಿಗಳನ್ನು 4- 5 ಮೀಟರ್ ಅಂತರದಲ್ಲಿ ನೆಡಬೇಕು. 4- 5 ವರ್ಷಗಳಲ್ಲೇ ಫಲ ಬಿಡಲಾರಂಬಿಸುತ್ತದೆ. ಇದರಿಂದ ಜ್ಯೂಸ್, ಐಸ್‌ಕ್ರೀಂ ತಯಾರಿಸಬಹುದು. <
ರಾಮಫಲವು ಸೀತಾಫಲದ ಜಾತಿಗೆ ಸೇರಿದ ಹಣ್ಣು. ಇದರಲ್ಲಿ ಬೀಜ ಇರಲ್ಲ. ಸೀತಾಫಲ ಗಿಡ, ಇದು ಮರ. ಕಾಂಡ, ಎಲೆ, ಹೂವು, ಹಣ್ಣು ಎಲ್ಲವೂ ಗಾತ್ರದಲ್ಲಿ ಅದಕ್ಕಿಂತ ದೊಡ್ಡದು. ಗಟ್ಟಿ ಮೊಸರಿನಂತೆ ಸಿಹಿಯಾದ ತಿರುಳು ಸಮೃದ್ಧ. ಇದರ ವೈಜ್ಞಾನಿಕ ಹೆಸರು ಅನ್ನೋನಾ ರೆಟಿಕ್ಯುಲಾಟ.
ಮೂಲ ಸ್ಥಾನ
ದ. ಅಮೆರಿಕ, ವೆಸ್ಟ್‌ಇಂಡೀಸ್ ಇದರ ಮೂಲ ಸ್ಥಾನ. ಈಗ ಪ್ರಪಂಚದೆಲ್ಲೆಡೆ ಕಂಡುಬರುತ್ತಿದೆ. 4.5 ಮೀಟರ್‌ದಿಂದ 10 ಮೀ. ಸುತ್ತಳತೆಯಲ್ಲಿ ಹರಡಿಕೊಳ್ಳುವ ಈ ಮರ 15 ರಿಂದ 30 ಅಡಿ ಎತ್ತರ ಬೆಳೆಯುತ್ತದೆ. ಸರಿಯಾಗಿ ಆರೈಕೆ ಮಾಡಿದಲ್ಲಿ ಬೀಜ ನೆಟ್ಟು ನಾಲ್ಕು ವರ್ಷದಲ್ಲೇ ಫಲ ಕೊಡಲಾರಂಭಿಸುತ್ತದೆ. ಹೂವು ದಪ್ಪವಾದ ಮೂರು ದಳ ಹೊಂದಿದ್ದು, ತಿಳಿಹಸಿರು- ಹಳದಿ ಬಣ್ಣದಿಂದಿದ್ದು, ಕೆಳಮುಖದಲ್ಲಿ ನೇತಾಡುತ್ತಿರುತ್ತದೆ. ಪೂರ್ಣ ಅರಳುವುದಿಲ್ಲ. ಬಹುತೇಕ ಜುಲೈ- ಆಗಸ್ಟ್‌ನಲ್ಲಿ ಹೂವು ಬಿಟ್ಟರೆ ನವೆಂಬರ್- ಡಿಸೆಂಬರ್‌ನಲ್ಲಿ ಫಲ ನೀಡಲಾರಂಭಿಸುತ್ತದೆ. ಹಣ್ಣು ಹಳದಿ ಮಿಶ್ರಿತ ಕೆಂಪು ಬಣ್ಣವಿರುತ್ತದೆ. 5- 6 ತಿಂಗಳವರೆಗೂ ಹಣ್ಣು ಸಿಗುತ್ತದೆ.
ಬೇಗ ಕೆಡಲ್ಲ
ಹಣ್ಣು ಕಿತ್ತ ಮೇಲೆ 2- 4 ದಿನಗಳವರೆಗೂ ಕೆಡದೆ ಉಳಿಯುತ್ತದೆ. ಆರೈಕೆ ಸರಿಯಾಗಿ ಮಾಡಿದಲ್ಲಿ ಒಂದು ಮರ 40- 50 ಕೆಜಿಯಷ್ಟು ಹಣ್ಣು ನೀಡುತ್ತದೆ. 10- 15 ವರ್ಷದ ಮರ 250- 300 ಹಣ್ಣು ನೀಡಿದ ಉದಾಹರಣೆಯೂ ಉಂಟು.
ಪೋಷಕಾಂಶ ಗಣಿ
ಮಳೆಗಾಲದ ಪ್ರಾರಂಭದಲ್ಲಿ ಹಟ್ಟಿಗೊಬ್ಬರ, ಬೂದಿಗೊಬ್ಬರ, ಸಾವಯವ ಗೊಬ್ಬರದ ಮಿಶ್ರಣ ಹದ ನೋಡಿ ಹಾಕಿದರೆ ಮರ ಅಧಿಕ ಫಸಲು ಕೊಡುತ್ತದೆ. ಹಣ್ಣು ಶರೀರಕ್ಕೆ ಅವಶ್ಯಕವಾದ ಹಲವು ಪೋಷಕಾಂಶ, ತೇವಾಂಶ ಹೊಂದಿದೆ. ಬೀಜ ಕಂದುಕಪ್ಪು ಬಣ್ಣದ್ದಿರುತ್ತದೆ. ಇದರ ಬೀಜದಿಂದ ಸಸಿ ಮಾಡಬಹುದು. ಕಸಿ ಕಟ್ಟುವುದರಿಂದಲೂ ಮಾಡಬಹುದು. ಸಸಿಗಳನ್ನು 4- 5 ಮೀಟರ್ ಅಂತರದಲ್ಲಿ ನೆಡಬೇಕು. 4- 5 ವರ್ಷಗಳಲ್ಲೇ ಫಲ ಬಿಡಲಾರಂಬಿಸುತ್ತದೆ. ಇದರಿಂದ ಜ್ಯೂಸ್, ಐಸ್‌ಕ್ರೀಂ ತಯಾರಿಸಬಹುದು.
- ಸೀತಾ ಎಸ್. ನಾರಾಯಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.