ಕೃಷಿ-ಪರಿಸರ

ಎಲೆಕೋಸು

ದೇಶದ ಪ್ರಮುಖ ತರಕಾರಿ ಬೆಳೆಗಳಲ್ಲಿ ಎಲೆಕೋಸು(ಕ್ಯಾಬೇಜ್) ಪ್ರಮುಖ. ಇದನ್ನು ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಆಸ್ಸಾಂ ಪಶ್ಚಿಮ ಬಂಗಾಳ...

ಎಲೆಕೋಸು
Published On :

ದೇಶದ ಪ್ರಮುಖ ತರಕಾರಿ ಬೆಳೆಗಳಲ್ಲಿ ಎಲೆಕೋಸು(ಕ್ಯಾಬೇಜ್) ಪ್ರಮುಖ. ಇದನ್ನು ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಆಸ್ಸಾಂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ವಿಟಾಮಿನ್ ಎ ಮತ್ತು ಸಿ ಯಥೇಚ್ಛವಾಗಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಬೆಳೆಯುವ ವಿಧಾನ

ಬೀಜ ನಾಟಿ ಮಾಡುವುದಕ್ಕಿಂತ ಮುಂಚೆ 25ರಿಂದ 30 ಸೆಂಮೀ ಆಳದಷ್ಟು ಉಳುಮೆ ಮಾಡಬೇಕು. ಬಳಿಕ ಹೆಂಡೆಗಳಿಲ್ಲಂತೆ ಸಮತಟ್ಟು ಮಾಡಬೇಕು. ಇದಕ್ಕೆ 25ರಿಂದ 30 ಸೆ. ಉಷ್ಣತೆ ಸಾಕು. ಹೆಚ್ಚಿನ ಉಷ್ಣತೆ ತಾಳದು. ಆಗಸ್ಟ್- ಸೆಪ್ಟೆಂಬರ್ ಮತ್ತು ಸೆಪ್ಟೆಂಬರ್- ಅಕ್ಟೋಬರ್ ನಾಟಿಗೆ ಸಕಾಲ. ಪಾಲಿಹೌಸ್ ನಿರ್ಮಿಸಿ ಬೆಳೆಯಬದುದು. ಅಥವಾ ನಿರ್ಮಿಸದೆಯೂ ಬೆಳೆ ತೆಗೀಬಹುದು. ಬೀಜವನ್ನು 45್ಢ45 ಸೆಂಮೀ ಅಂತರದಲ್ಲಿ ನಾಟಿ ಮಾಡಬೇಕು. ತಜ್ಞರ ಸಲಹೆ ಪಡೆದು ಗೊಬ್ಬರ ಹಾಕಬೇಕು. ಪ್ರತಿದಿನ ಅಥವಾ ದಿನ ಬಿಟ್ಟು ದಿನ ನೀರು ಹಾಯಿಸಬೇಕು. ಕಳೆ ಹರಡದಂತೆ ನಿಯಂತ್ರಣ ಕೈಗೊಳ್ಳಬೇಕು.

ತಳಿಗಳು
ಹಲವು ನಮೂನೆ ತಳಿಗಳುಂಟು. ಆ ಪೈಕಿ ಪ್ರೈಡ್ ಆಫ್ ಇಂಡಿಯಾ, ಗ್ರೀನ್ ಎಕ್ಸ್‌ಪ್ರೆಸ್ ಬಾಯ್, ಪುಸಾ ಮುಕ್ತಾ, ಪುಸಾ ಡ್ರಮ್ ಹೆಡ್ ಮತ್ತು ಹರಿ ರಾಮ್ ಇವು ಎಲೆಕೋಸಿನ ಪ್ರಮುಖ ತಳಿಗಳಾಗಿವೆ.

ಮಣ್ಣು
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು. ಆದರೂ ಮರಳು ಮಿಶ್ರಿತ, ಸಾವಯವ ಅಧಿಕ ಪ್ರಮಾಣದಲ್ಲಿ ಇರುವ ಮಣ್ಣಲ್ಲಿ ಎಲೆಕೋಸು ಹುಲುಸಾಗಿ ಬೆಳೆಯುವುದು. 5.5ರಿಂದ 6.5 ರಸಸಾರವಿರಬೇಕು.
ಎಲೆ ಮುರುಟು, ಎಲೆ ಕಪ್ಪಗಾಗುವುದು ಸೇರಿದಂತೆ ಹಲವು ರೋಗಗಳು ಕಾಡಬಹುದು. ರೋಗ ಬರದಂತೆ, ಬಂದರೆ ಕೂಡಲೇ ನಿಯಂತ್ರಣ ಕ್ರಮ ಕೈಗೊಳ್ಳಬೇಕು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.