ಫಾರ್ಚ್ಯೂನ್ 400

ಹೊಸ ಯಂತ್ರ ರೈತ ಮಿತ್ರ
ಕೃಷಿ ಕ್ಷೇತ್ರಕ್ಕೆ ಇಂದು ಆಧುನಿಕತೆಯ ಟಚ್. ಅದರ ಫಲವಾಗಿ ಹಲವಾರು ರೀತಿಯ ನೂತನ ಆವಿಷ್ಕಾರಗಳು. ಗದಗ ನಗರದಲ್ಲಿರುವ ತೋಂಟದಾರ್ಯ ಎಂಜನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು 'ರೈತ ಮಿತ್ರ ಕಿಸಾನ್ ಫಾರ್ಚ್ಯೂನ್ 400' ಎನ್ನುವ ಹೊಸ ಯಂತ್ರ ಸಿದ್ಧಪಡಿಸಿದ್ದು, ಇದು ರೈತರಿಗೆ ಹಲವು ರೀತಿ ಉಪಯೋಗಕ್ಕೆ ಸಹಕಾರಿಯಾಗಿದೆ.
ಹೆಣಗಾಟವಿಲ್ಲ
ಎತ್ತರ ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮಾಡಲು ಮತ್ತು ಕಳೆ (ಕಸ)ಯನ್ನು ಸ್ವಚ್ಛಗೊಳಿಸಲು, ಗೊಬ್ಬರ ಹಾಕಲು ರೈತರು ಸಾಕಷ್ಟು ಹೆಣಗಾಡುತ್ತಾರೆ. ಫಾರ್ಚ್ಯೂನ್- 400 ಯಂತ್ರ ಈ ಎಲ್ಲ ಕಾರ್ಯಗಳನ್ನು ಅತ್ಯಂತ ಸುಲಲಿತವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುತ್ತಿದ್ದು, ರೈತರಿಗೆ ಹೆಚ್ಚಿನ ಅನುಕೂಲಕಾರಿಯಾಗಿದೆ. ಈ ಯಂತ್ರವು ನಾಲ್ಕು ಗಾಲಿ ಹೊಂದಿದ್ದು, ಇದಕ್ಕೆ ಎತ್ತರವಾದ ಒಂದು ಸ್ಟ್ಯಾಂಡ್ ಅಳವಡಿಸಲಾಗಿದೆ.
ಬಿತ್ತನೆಗೂ ಸಹಕಾರಿ
ಯಂತ್ರವೂ ರೈತರಿಗೆ ಬಿತ್ತನೆ ಮಾಡಲು ಸಾಕಷ್ಟು ಸಹಾಯಕವಾಗುವ ಅಂಶ ಹೊಂದಿದ್ದು, ಈ ವಾಹನದ ಹಿಂಬದಿಯಲ್ಲಿ ಬಿತ್ತನೆಗೆ ಬೇಕಾಗುವ ವಿವಿಧ ಕೃಷಿ ಉಪಕರಣ ಇಟ್ಟುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಹೊಲಗಳ ಸ್ಥಿತಿಗತಿ ಮತ್ತು ಭೂಮಿಯ ಗುಣಧರ್ಮ ಆಧರಿಸಿ, ಬಿತ್ತನೆ ಮಾಡುವ ವೇಳೆಯಲ್ಲಿ ಬಳಸಲು ಅನುಕೂಲವಾಗುವಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಜೈವಿಕ ಇಂಧನದಿಂದ ನಡೆಯುತ್ತೆ!
ಈ ಯಂತ್ರದ ಇನ್ನೊಂದು ವಿಶೇಷತೆ ಎಂದರೆ ಜೈವಿಕ ಇಂಧನದಿಂದ ನಡೆಯುವ ರೀತಿಯಲ್ಲಿ ವಿನ್ಯಾಸಗೊಳಿಸಿರುವುದು. ಇದು ರೈತರಿಗೂ ಅನುಕೂಲ ಹಾಗೂ ಪರಿಸರಕ್ಕೂ ಯಾವುದೇ ರೀತಿ ಹಾನಿ ಇಲ್ಲ. ರೈತರು ತಮ್ಮ ಹೊಲಗಳಲ್ಲಿಯೇ ಜೈವಿಕ ಇಂಧನ ನೀಡುವ ಗಿಡಗಳನ್ನು ಹಾಕಿಕೊಂಡಲ್ಲಿ, ಡೀಸೆಲ್ ಖರೀದಿಯ ಖರ್ಚು ತಪ್ಪಲಿದ್ದು, ಇದೊಂದು ಸಂಪೂರ್ಣ ರೈತಸ್ನೇಹಿ ಆವಿಷ್ಕಾರವಾಗಿದೆ.ಮಾಹಿತಿಗಾಗಿ: 9738488590.
ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಪ್ರದೀಪ ಬೆಣ್ಣಿಶೆಟ್ಟಿ, ಮಹೇಶ ರಾಮದುರ್ಗ, ಅರುಣ ಗುಳಗೌಡರ, ರಾಮಕೃಷ್ಣ ಕಟ್ಟಿ ರು. 65 ಸಾವಿರ ವೆಚ್ಚದಲ್ಲಿ ಈ ಯಂತ್ರ ಸಿದ್ಧಪಡಿಸಿದ್ದು, ಕೃಷಿ ತಜ್ಞ ಎಸ್.ಎ. ಕೋರಿ ಅವರ ಮಾರ್ಗದರ್ಶನ ಹಾಗೂ ಕಾಲ ಕಾಲಕ್ಕೆ ಹಿರಿಯ ಉಪನ್ಯಾಸಕರ ಸಲಹೆ ಪಡೆದು ನಿರ್ಮಿಸಿದ್ದು, ಕೃಷಿ ಕ್ಷೇತ್ರಕ್ಕೆ ಇದೊಂದು ಉತ್ತಮ ಕೊಡುಗೆ.
= ಪ್ರೊ.ಡಿ.ಎಂ. ಗೌಡರ, ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


