ಕೃಷಿ-ಪರಿಸರ

ಮಳೆ ಡಬ್ಲಿಂಗ್!

ಮಳೆ ಡಬ್ಲಿಂಗ್!
Published On :

ಹಣ ದ್ವಿಗುಣ ಮಾಡುವ ವಿವಿಧ ರೂಪದ ಡಬ್ಲಿಂಗ್ ದಂಧೆ ಎಲ್ಲರಿಗೂ ಗೊತ್ತು. ಆದರೆ, ಒಂದು ಪ್ರದೇಶದಲ್ಲಿ ಸುರಿವ ಮಳೆ, ಅದರಿಂದ ಫಸಲಿನ ಮೇಲಾಗುವ ಪರಿಣಾಮವನ್ನೇ ದ್ವಿಗುಣಗೊಳಿಸಿ ಉತ್ತಮ ಇಳುವರಿ ಪಡೆಯಬಹುದು!
ಅಚ್ಚರಿಯಾದರೂ ಇದು ನಿಜ. ಗುಲ್ಬರ್ಗದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಡಬ್ಲಿಂಗ್ ಆಫ್ ರೇನ್ ಫಾಲ್ ವಿಧಾನ ಕಂಡುಹಿಡಿದಿದ್ದಾರೆ. ಕಡಿಮೆ ಮಳೆಯಾದರೂ ತೊಗರಿಯಂಥ ಪ್ರಮುಖ ವಾಣಿಜ್ಯ ಬೆಳೆ ದ್ವಿಗುಣ ಪ್ರಮಾಣದಲ್ಲಿ ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ರೂವಾರಿ ಇಲ್ಲಿನ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಬಿ.ಟಿ. ಪೂಜಾರಿ. ಕೃಷಿ ವಿಜ್ಞಾನ ಕೇಂದ್ರದ ಆವರಣದ 5 ಎಕರೆ ಪ್ರದೇಶದಲ್ಲೇ ಈ ಪ್ರಯೋಗ ನಡೆಸಿ, ಯಶಸ್ವಿಯಾಗಿದ್ದಾರೆ.

ಕಳೆನಾಶಕ ಕಡ್ಡಾಯ
ಮಳೆ ದ್ವಿಗುಣ ಪದ್ಧತಿಯ ಹೊಲದಲ್ಲಿ ಕಳೆ ಸಮಸ್ಯೆ ಕಾಡುವುದು ಸಹಜ. ಈ ಸಂದರ್ಭದಲ್ಲಿ ರೈತರು ಬಿತ್ತನೆ ಪೂರ್ವ, ಬಿತ್ತನೆ ನಂತರ 2 ಬಾರಿ ಕಳೆನಾಶಕ ಬಳಸಲೇಬೇಕು. 'ವಿ' ಆಕಾರದ ರಚನೆಯಲ್ಲಿ ನೀರು ನಿಲ್ಲುವುದರಿಂದ ಇಲ್ಲಿ ಹುಲ್ಲು, ಗರಿಕೆ ಬೆಳೆಯಲು ಅವಕಾಶ ಅಧಿಕ. ಇದಲ್ಲದೆ ಈ ವಿಧಾನದಲ್ಲಿ ಹೆಚ್ಚಿನ ನೀರು ಬಸಿದು ಹೋಗಲು ಪಕ್ಕದಲ್ಲೇ ನಾಲೆ ಹೋಲುವ ರಚನೆ ಮಾಡಬೇಕಾಗುತ್ತದೆ. ಈ ರಚನೆಯುದ್ದಕ್ಕೂ ಕಳೆ ಬೆಳೆಯುವ ಸಾಧ್ಯತೆಗಳಿರುತ್ತವೆ. ಇವೆಲ್ಲ ಕಾರಣಗಳಿಂದ 2 ಬಾರಿ ಕೀಟನಾಶಕ ಬಳಸಲೇಬೇಕು.

ಕರೆ ಮಾಡಿ ಮಾಹಿತಿ ಪಡೆಯಿರಿ
ಚಾಲ್ತಿಯಲ್ಲಿರುವ ಗುಲ್ಯಾಳ, ಹತ್ತಿ ಬೀಜ, ದೇಸಿ ತೊಗರಿ, ಮಾರುತಿ, ಟಿಎಸ್‌ಆರ್- 3 ಸೇರಿದಂತೆ ಎಲ್ಲಾ ನಮೂನೆಯ ತೊಗರಿಗೂ ಮಳೆ ಡಬ್ಲಿಂಗ್ ವಿಧಾನ ಅನುಸರಿಸಬಹುದು. ರೈತರು ಇನ್ನೂ ಈ ವಿಧಾನವನ್ನು ಅಷ್ಟಾಗಿ ಅಳವಡಿಸಿಕೊಳ್ಳುತ್ತಿಲ್ಲ. ಆಸಕ್ತ ತೊಗರಿ ರೈತರು ಮಳೆ ದ್ವಿಗುಣ ಮಾಡುವ ವಿಧಾನದ ಬಗ್ಗೆ ವಿಜ್ಞಾನಿ ಡಾ. ಬಿ.ಟಿ. ಪೂಜಾರಿ ಅವರನ್ನು (ಮೊ. 9480696305) ಸಂಪರ್ಕಿಸಬಹುದು.

ಏನಿದು ಮಳೆ ಡಬ್ಲಿಂಗ್?

ತೊಗರಿ ಬಿತ್ತುವ ಹೊಲ- ಗದ್ದೆಯಲ್ಲಿ ಟ್ರ್ಯಾಕ್ಟರ್, ನೇಗಿಲು ಬಳಸಿ ಮೊದಲು ಚೆನ್ನಾಗಿ ಭೂಮಿ ಹಸನು ಮಾಡಬೇಕು. ಅಲ್ಲಿ ಇಂಗ್ಲಿಷ್ 'ವಿ' ಆಕಾರ ರಚನೆಗಳನ್ನು ಸ್ವಲ್ಪವೇ ಮಳೆಯಾದರೂ ಪರವಾಗಿಲ್ಲ, ಒಣ ಭೂಮಿಯಲ್ಲೇ ಬಿತ್ತನೆ ಮಾಡಿದರೂ ಸಾಕು. ಮುಂದೆ ಮಳೆ ಸುರಿದಾಗ ನೀರು 'ವಿ' ಆಕಾರದ ಇಕ್ಕೆಲಗಳಲ್ಲಿನ ಚಿಕ್ಕ ಬದುವಿನಿಂದ ಜಾರಿ ನಟ್ಟ ನಡುವೆ ಶೇಖರಣೆಯಾಗುತ್ತವೆ. ಉದಾ: 50 ಮಿಮೀ ಮಳೆ ಸುರಿದರೂ 'ವಿ' ರಚನೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ನಿಲ್ಲುವುದರೊಂದಿಗೆ 100 ಮಿ.ಮೀ. ಮಳೆ ಸುರಿದಷ್ಟು ಪರಿಣಾಮ ಉಂಟಾಗುತ್ತದೆ. ಇದನ್ನೇ ಮಳೆ ಡಬ್ಲಿಂಗ್.

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.