ಕೃಷಿ-ಪರಿಸರ

ಪಚೋಲಿ

ಪಚೋಲಿ
Published On :

ಇದೊಂದು ಔಷಧಿಯ ಬೆಳೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರದೇಶಗಲ್ಲಿ ಬೆಳೆಯುತ್ತಾರೆ. ಹೊಸ- ಹೊಸ ಬೆಳೆ ಬೆಳೆಯಬೇಕೆನ್ನುವವರು, ಪ್ರಯೋಗಶೀಲ ಪ್ರವೃತ್ತಿಯುಳ್ಳವರು ಪಚೋಲಿಯನ್ನು ಒಮ್ಮೆ ಬೆಳೆಯಬಹುದು.

ಬೆಳೆಯುವ ವಿಧಾನ
ಮೊದಲು ಕಾಂಡದಿಂದ ಸಸ್ಯಾಭಿವೃದ್ಧಿ ಮಾಡಬೇಕು. ಅಂದರೆ ಕಾಂಡವನ್ನು ಒಂದು ಸಮತಟ್ಟಾದ ನೆಟ್ಟು ಬೆಳೆಸಬೇಕು. ತಿಂಗಳ ಬಳಿಕ ಅದನ್ನು ಕಿತ್ತು ಜಮೀನಿನಲ್ಲಿ 2 ್ಢ 2 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಹಾಕಬೇಕು. ಬಳಿಕ ವಾರಕ್ಕೊಮ್ಮೆ ನೀರು ಹಾಯಿಸಬೇಕು. 20 ದಿನದ ನಂತರ ಮತ್ತೊಮ್ಮೆ ಗೊಬ್ಬರ ನೀಡಬೇಕು. ನಾಟಿ ಮಾಡಿದ 6 ತಿಂಗಳಿಗೆ ಕಟಾವಿಗೆ ಬರುತ್ತದೆ. ಗಿಡಗಳನ್ನು ಕಂಪನಿಯವರೇ ಜಮೀನಿಗೆ ಬಂದು ತೆಗೆದುಕೊಂಡು ಹೋಗುತ್ತಾರೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 20ರಿಂದ 30 ಕ್ವಿಂಟಲ್ ಇಳುವರಿ ಸಿಗುತ್ತದೆ. ಎಕರೆಗೆ ಒಟ್ಟು ರು. 15 ಸಾವಿರ ಖರ್ಚು ಬರುತ್ತದೆ. ಕನಿಷ್ಠ ರು. 80 ಸಾವಿರ ಲಾಭ ಗಳಿಸಬಹುದು.

ಮಣ್ಣು
ಮರಳು ಮಿಶ್ರಿತ ಕೆಂಪು ಮಣ್ಣು ಇದ್ದರೆ ಉತ್ತಮ. ಇತರೆ ಮಣ್ಣಲ್ಲಿ ಬೆಳೆಯಬಹುದು. ಬಿಸಿಲು ಜಾಸ್ತಿ ಇದ್ದರೂ ತಾಳುತ್ತದೆ.

ಉಪಯೋಗ
ಪಚೋಲಿಯನ್ನು ಮುಖ್ಯವಾಗಿ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಅಲ್ಲದೆ, ಆಯುರ್ವೇದ ಔಷಧಿ, ಅದರ ಕಡ್ಡಿಯಿಂದ ಅಗರಬತ್ತಿ ತಯಾರಿಸಲು ಬಳಸುತ್ತಾರೆ.

ಮಾರುಕಟ್ಟೆ
ಪಚೋಲಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಯಾಕೆಂದರೆ ಕಂಪನಿಯವರೆ ಖುದ್ದಾಗಿ ಜಮೀನಿಗೆ ಬಂದು ಕೊಂಡೊಯ್ಯುತ್ತಾರೆ. ಅದರ ದರವನ್ನು ಅವರೇ ನಿಗದಿಪಡಿಸುತ್ತಾರೆ. ಈ ಬಾರಿ ಕೆಜಿಗೆ ರು. 42 ಇದೆ. ಇಷ್ಟು ಧಾರಣೆ ಇದ್ದರೆ ಲಾಭಕಾರಿ ಅಲ್ಲದೆ ಇದಕ್ಕೆ ಯಾವುದೇ ರೋಗ ತಗುಲದು ಎಂಬುದು ಅನುಭವಿ ಕೃಷಿಕರ ಮಾತು. ಹೆಚ್ಚಿನ ಮಾಹಿತಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುಸೂರು ಗ್ರಾಮದ ರೈತ ಮಂಜುನಾಥ್ (ಮೊ. 8861492927) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.