ಕೃಷಿ-ಪರಿಸರ

ಜೌಷಧಿ ಸಿಂಪಡಣೆಗೆ ಸರಳ ಸಾಧನ

ಜೌಷಧಿ ಸಿಂಪಡಣೆಗೆ ಸರಳ ಸಾಧನ
Published On :

ಕೃಷಿಕರಿಗೆ ಕಾರ್ಮಿಕರದೆ ಬಲುದೊಡ್ಡ ಸಮಸ್ಯೆ. ದುಪ್ಪಟ್ಟು ಪಗಾರ ಕೊಟ್ಟರೂ ಸಿಗದ ಕೂಲಿಯಾಳುಗಳಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಆದರೆ, ಇಂಥ ಸಮಸ್ಯೆಗೆ ಹಲವು ರೈತರು ಮಾರ್ಗೋಪಾಯ ಕಂಡುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಪಸ್ಸಿಹಳ್ಳಿಯ ಸದಾನಂದ ಎಂಬವರು ಜಮೀನಿಗೆ ಔಷಧಿ ಸಿಂಪಡಿಸಲು ಸರಳ, ಕಡಿಮೆ ಖರ್ಚಿನ ವಿಧಾನವೊಂದನ್ನು ಕಂಡುಕೊಂಡಿದ್ದಾರೆ. ಅವರ ಬಳಿ ಹಳೆಯ ಚೇತಕ್ ಸ್ಕೂಟರ್ ಇದೆ. ಅವಶ್ಯಕತೆ ಇದ್ದಾಗ ಓಡಾಡಲು ಬಳಸುತ್ತಾರೆ. ಇನ್ನುಳಿದ ಸಮಯದಲ್ಲಿ ಜಮೀನಿನಲ್ಲಿ ಔಷಧಿ ಸಿಂಪಡಿಸಲು ಬಳಸುತ್ತಾರೆ. ಹೇಗೆ ಅಂತೀರಾ?
ಚೇತಕ್ ಸ್ಕೂಟರ್‌ನಲ್ಲಿ ಅರ್ಧ ಅಶ್ವಶಕ್ತಿ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದಾರೆ. ಅದನ್ನು ಸ್ಕೂಟರ್ ಎಂಜಿನ್‌ಗೆ ಸಂಪರ್ಕ ಕಲ್ಪಿಸಲು ಪಟ್ಟಿ(ಬೆಲ್ಟ್) ಹಾಕಿದ್ದಾರೆ. ಪಂಪ್‌ನ ಒಂದು ಪೈಪ್‌ಅನ್ನು ಡ್ರಮ್‌ಗೆ ಇನ್ನೊಂದು ಪೈಪ್‌ಅನ್ನು ಜಮೀನಿಗೆ ಔಷಧಿ ಸಿಂಪಡಿಸಲು ಬಳಸುತ್ತಾರೆ. ಅದಕ್ಕಿಂತ ಪೂರ್ವದಲ್ಲಿ ಡ್ರಮ್‌ನಲ್ಲಿ ಜಮೀನಿಗೆ ಹಾಕುವ ಔಷಧಿ, ಲಿಕ್ವಿಡ್ ಗೊಬ್ಬರ ಮೊದಲಾದವುಗಳನ್ನು ಹಾಕುತ್ತಾರೆ. ನಂತರ ಮೋಟಾರ್ ಆನ್ ಮಾಡಿದರೆ ಜಮೀನಿಗೆ ಪೈಪ್ ಮೂಲಕ ಔಷಧಿ ಸಿಂಪಡಣೆ! ಈ ವಿಧಾನದಿಂದ ಇಡೀ ದಿನ 3 ಕಾರ್ಮಿಕರು ಮಾಡುವ ಕೆಲಸವನ್ನು ಕೇವಲ ಒಂದು ಗಂಟೆಯಲ್ಲಿ ಮಾಡಿ ಮುಗಿಸುತ್ತದೆ. ಅಷ್ಟೇ ಅಲ್ಲ, ಕಾರ್ಮಿಕರಿಗೆ ಕೊಡುವ ಕೂಲಿ ಐದಾರು ನೂರು ಉಳಿಸುತ್ತದೆ. ಅರ್ಧ ಲೀಟರ್ ಪೆಟ್ರೋಲ್ ಖರ್ಚಾಗಬಹುದು. ಮಾಹಿತಿಗಾಗಿ ಸದಾನಂದ ಅವರ ಮೊ. 9241602789.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.