ರಾಗಿರಾಗ

ರಾಗಿ ಬಯಸೋದು ಏನನ್ನು?
ರಾಗಿ ಉಂಡವನಿಗೆ ರೋಗವಿಲ್ಲ ಎಂಬ ಮಾತು ಜನಜನಿತ. ಇದು ರಾಗಿಯಲ್ಲಿ ಎಷ್ಟೊಂದು ತಾಕತ್ತು ಅಡಗಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಪ್ರಮುಖ ಆಹಾರ ಬೆಳೆಗಳಲ್ಲಿ ಇದೂ ಒಂದು. ಇದನ್ನು ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಹೆಚ್ಚಾಗಿ ಹಳೇ ಮೈಸೂರು ಭಾಗದಲ್ಲಿ ಬೆಳೆಯುತ್ತಾರೆ. ಅಲ್ಲದೆ, ಈ ಭಾಗದ ಪ್ರಮುಖ ಆಹಾರವೂ ರಾಗಿಮುದ್ದೆ.
ಬೆಳೆಯುವ ವಿಧಾನ
ರಾಗಿ ಅಲ್ಪಾವಧಿ ಬೆಳೆ. ಅಂದರೆ ಬಿತ್ತನೆ ಮಾಡಿದ 120 ದಿನಗಳಲ್ಲಿ ಫಸಲು ಕೈಗೆ ಬರುತ್ತದೆ. ಇದನ್ನು ನೀರಾವರಿ, ಮಳೆಯಾಶ್ರಿತವಾಗಿ ಬೆಳೆಯಬಹುದು. ಮಳೆಯಾಶ್ರಿತವಾಗಿ ಬೆಳೆಯುವುದಾದರೆ ಜುಲೈ- ಆಗಸ್ಟ್ ತಿಂಗಳು ಸಕಾಲ. ಬೀಜ ಬಿತ್ತುವುದಕ್ಕಿಂತ ಪೂರ್ವದಲ್ಲಿ ಜಮೀನನ್ನು ಉಳುಮೆ ಮಾಡಿ ಹೆಂಟೆ ಇಲ್ಲದಂತೆ ಹದಗೊಳಿಸಬೇಕು. ನಂತರ ಅದಕ್ಕೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಕೆರೆ ಹೂಳು ಹಾಕಿದರೂ ಇಳುವರಿ ಹೆಚ್ಚು ಬರುತ್ತದೆ. ನಂತರ ನಿರ್ದಿಷ್ಟ ಜಾಗದ ಅಂತರದಲ್ಲಿ ಬೀಜ ಬಿತ್ತನೆ ಮಾಡಬೇಕು. ನೀರಾವರಿಯಾಶ್ರಿತವಾಗಿ ಬೆಳೆದರೆ ಹನಿ ನೀರಾವರಿ ಪದ್ಧತಿ ಉತ್ತಮ. ಬಿತ್ತಿದ 20 ದಿನದ ಬಳಿಕ ಒಮ್ಮೆ ಕಳೆ ತೆಗೆಯಬೇಕು. ಹೆಚ್ಚಿನ ನಿರ್ವಹಣೆ ಬಯಸುವುದಿಲ್ಲ. ರೋಗ ಬಂದರೆ ತಕ್ಷಣ ಮುಂಜಾಗ್ರತೆ ಕೈಗೊಳ್ಳಬೇಕು. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 15ರಿಂದ 16 ಕ್ವಿಂಟಲ್ ಇಳುವರಿ ಪಡೆಯಬಹುದು. ಇನ್ನು ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು.
ತಳಿಗಳು
ಜಿಪಿ- 28, ಎಂಆರ್- 1, ಎಂಆರ್- 11, ಎಚ್‌ಆರ್- 911 ಇಂಡಾಫ್- 8 ಸೇರಿದಂತೆ ಹಲವು ನಾಟಿ ತಳಿಗಳಲ್ಲಿ ರಾಜ್ಯದಲ್ಲಿ ಬೆಳೆಯಲಾಗುತ್ತದೆ.
ರೋಗಗಳು
ಎಲೆಸುರುಳಿ ರೋಗ, ಕಾಡಿಗೆ ರೋಗ, ಬೆಂಕಿ ರೋಗ ಮತ್ತು ಹಸಿರು ಜಂಗು ಹುಳು ಬಾಧೆ ಕಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಎಚ್.ಜಿ. ಗೋಪಾಲಗೌಡ (ಮೊ. 9448138397) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


