ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ನವೆಂಬರ್ 29ರಂದು 43ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಸಿನಿಮಾರಂಗದಿಂದ ದೂರವಾಗಿ ಅವರು ಹಲವು ವರ್ಷಗಳೇ ಕಳೆದರೂ ಜನಪ್ರಿಯತೆ ಮಾತ್ರ ಕುಗ್ಗಿಲ್ಲ.
ಇತ್ತೀಚೆಗೆ ಹಲವು ಸ್ಕ್ರಿಪ್ಟ್ ಕಥೆ ಕೇಳಿದ್ದೇನೆ, ಒಂದು ಬಹಳ ಇಷ್ಟವಾಗಿದೆ, ಸದ್ಯದಲ್ಲಿಯೇ ಮತ್ತೆ ತೆರೆ ಮೇಲೆ ಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದರು.
ಸಾಕಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿದ್ದಾರಂತೆ. ಅದರಲ್ಲಿ ಒಂದು ಐತಿಹಾಸಿಕ ಸಿನಿಮಾದ ಸ್ಕ್ರಿಪ್ಟ್ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ನಟ ವಿನಯ್ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಆಪ್ತ ಗೆಳೆಯರ ಬಳಗ ಜೊತೆ ರಮ್ಯಾ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
‘ಅಭಿ’ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ‘ಎಕ್ಸ್ಕ್ಯೂಸ್ ಮಿ’ ಸಿನಿಮಾದಿಂದ ದೊಡ್ಡ ಗೆಲುವು ಕಂಡರು. ಆ ಬಳಿಕ ಅವರು ಹಲವು ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡರು.