ಅಮೀರ್ ಖಾನ್ ಅವರ 60ನೇ ವಯಸ್ಸಿನಲ್ಲಿ ಅವರ ಬಾಳಿನಲ್ಲಿ ಬಂದ ಸಂಗಾತಿಯ ಹೆಸರು ಗೌರಿ ಸ್ರಾಟ್ಟ್. ದೀರ್ಘ ಕಾಲದಿಂದ ಗೌರಿ ತಮಗೆ ಪರಿಚಯವಿದ್ದು ಕಳೆದೊಂದು ವರ್ಷದಿಂದ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ.
Sumana Upadhyaya
ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮಾರ್ಚ್ 14ರಂದು 60 ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರು ಈ ಬಾರಿ ಹೆಚ್ಚಿಗೆ ಸುದ್ದಿಯಾಗಿದ್ದು ಈ ಇಳಿ ವಯಸ್ಸಲ್ಲಿ ತಮ್ಮ ಮೂರನೇ ಸಂಗಾತಿಯನ್ನು ಪರಿಚಯಿಸುವ ಮೂಲಕ.
ನಿನ್ನೆ ಮಾಧ್ಯಮ ಮಿತ್ರರು, ಫೋಟೋಗ್ರಾಫರ್ ಗಳ ಮುಂದೆ ಕೇಕ್ ಕಟ್ ಮಾಡಿದ ಅಮೀರ್ ಖಾನ್ ಪ್ರಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಮಾಜಿ ಪತ್ನಿಯರಾದ ಕಿರಣ್ ರಾವ್, ರೀನಾ ದತ್ ಕೂಡ ಹಾಜರಿದ್ದರು. ತಮಾಷೆಯಾಗಿ ಮಾತನಾಡುತ್ತಾ ತಮ್ಮ ಗೆಳತಿಯ ಹೆಸರನ್ನು ಬಹಿರಂಗಪಡಿಸಿಯೇ ಬಿಟ್ಟರು. ಈ ಮೂಲಕ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟರು.
ಅಮೀರ್ ಖಾನ್ ಅವರ 60ನೇ ವಯಸ್ಸಿನಲ್ಲಿ ಅವರ ಬಾಳಿನಲ್ಲಿ ಬಂದ ಸಂಗಾತಿಯ ಹೆಸರು ಗೌರಿ ಸ್ಪ್ರಾಟ್. ದೀರ್ಘ ಕಾಲದಿಂದ ಗೌರಿ ತಮಗೆ ಪರಿಚಯವಿದ್ದು ಕಳೆದೊಂದು ವರ್ಷದಿಂದ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಗೌರಿ ಬೆಂಗಳೂರಿನವರು, 25 ವರ್ಷಗಳಿಂದ ಪರಿಚಯ. ಕಳೆದ ಒಂದೂವರೆ ವರ್ಷಗಳಿಂದ ಸಂಪರ್ಕದಲ್ಲಿದ್ದು ಜೊತೆಯಾಗಿದ್ದೇವೆ. ಆಕೆ ಮುಂಬೈಯಲ್ಲಿದ್ದಾಗ ನಾವು ಆಕಸ್ಮಿಕವಾಗಿ ಭೇಟಿಯಾಗಿ ಪರಿಚಯವಾಗಿ ಹತ್ತಿರವಾದೆವು. ನಂತರ ಎಲ್ಲವೂ ಸಹಜವಾಗಿ ಸಾಗಿತು ಎಂದು ಅಮೀರ್ ಖಾನ್ ಹೇಳುತ್ತಾರೆ.
ನಿನ್ನೆ ಅಮೀರ್ ಖಾನ್ ಅವರ ಪ್ರಿ ಬರ್ತ್ ಡೇ ಪಾರ್ಟಿಯಲ್ಲಿ ಅವರ ಕುಟುಂಬಸ್ಥರು, ಸಮೀಪದ ಹಿತೈಷಿಗಳು, ಬಾಲಿವುಡ್ ನಿಂದ ಸಲ್ಮಾನ್ ಖಾನ್, ಶಾರೂಖ್ ಖಾನ್ ಹಾಜರಿದ್ದರು. ಗೌರಿ ಸಹ ಪಾರ್ಟಿಗೆ ಜೊತೆಯಾಗಿದ್ದರು.
ಈ ವೇಳೆ ಅಮೀರ್ ಖಾನ್ ಹೇಗೆ ರೊಮ್ಯಾಂಟಿಕ್ ಆಗಿರ್ತಾರಾ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ಗೌರಿ ಅಮೀರ್ ನನಗಾಗಿ ಪ್ರತಿದಿನ ಏನಾದರೊಂದು ಹೊಸತನ್ನು ಮಾಡುತ್ತಿರುತ್ತಾರೆ ಎಂದರು. ಪ್ರಿಬರ್ತ್ ಡೇ ಪಾರ್ಟಿಯಲ್ಲಿ ಗೌರಿ ಕೈಹಿಡಿದು 1976ರ ಚಿತ್ರ ಕಬಿ ಕಬಿ ಮೇರೆ ದಿಲ್ ಮೆ ಹಾಡನ್ನು ಹಾಡಿದ ಅಮೀರ್ ಖಾನ್ ತಾನು ಆಗಾಗ ಗೌರಿಗಾಗಿ ಹಾಡುತ್ತಿರುತ್ತೇನೆ ಎಂದಿದ್ದಾರೆ.
ಬೆಂಗಳೂರು ಮೂಲದ ಗೌರಿಯ ತಾಯಿ ರಿಟಾ ಸ್ಪ್ರಾಟ್, ತಾಯಿ ಪಂಜಾಬಿ-ಐರಿಷ್ ಮೂಲದವರಾದರೆ ತಂದೆ ತಮಿಳು-ಬ್ರಿಟಿಷ್ ಮೂಲದವರು. ಅವರಿಗೆ ಬೆಂಗಳೂರಿನಲ್ಲಿ ಸಲೋನ್ ನಡೆಸುತ್ತಿದ್ದರು. ಗೌರಿ ತಮ್ಮ ಜೀವನದ ಅನೇಕ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.
Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics