ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭವು ವರ್ಣರಂಜಿತ ಬಣ್ಣಗಳು, ಅತ್ಯಾಕರ್ಷಕ ಲೈಟುಗಳೊಂದಿಗೆ ಫ್ರಾನ್ಸ್ ರಾಜಧಾನಿಯ ಸೀನ್ ನದಿಯ ಉದ್ದಕ್ಕೂ ವೈಭವೋಪೇತವಾಗಿ ನೆರವೇರಿತು.
ಜುಲೈ 26ರಿಂದ ಆಗಸ್ಟ್ 11ರವರೆೆಗೆ ಕ್ರೀಡಾಕೂಟ ನಡೆಯಲಿದ್ದು, ನಾಲ್ಕು ಗಂಟೆಗಳ ಅವಧಿಯ ಉದ್ಘಾಟನಾ ಸಮಾರಂಭ ಮೆರುಗು ನೀಡಿತು.
ಪರೇಡ್ ಆಫ್ ನೇಷನ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುಮಾರು 78 ಅಥ್ಲಿಟ್ ಗಳು ಮತ್ತು ಸಹಾಯಕ ಸಿಬ್ಬಂದಿ ಸೀನ್ ನದಿಯಲ್ಲಿ ಬೋಟ್ ನಲ್ಲಿ ಮಿಂಚಿದರು.
ಫುಟ್ಬಾಲ್ ಪಟು ಝಿನೆಡಿನ್ ಜಿಡಾನೆ ಅವರು ಒಲಿಂಪಿಕ್ ಜ್ಯೋತಿಯನ್ನು ಉದ್ಘಾಟನಾ ಸಮಾರಂಭಕ್ಕೆ ತಂದರು.
ಉದ್ಘಾಟನಾ ಸಮಾರಂಭದಲ್ಲಿ ಜಾರ್ಡಿನ್ ಡೆಸ್ ಟ್ಯುಲೆರೀಸ್‌ನಲ್ಲಿ ಬೆಳಗಿದ ಒಲಿಂಪಿಕ್ ಕೌಲ್ಡ್ರನ್ ಹೊತ್ತ ಬಲೂನ್ ಹಾರುತ್ತದೆ.
ಕಾರ್ಲ್ ಲೂಯಿಸ್, ರಾಫೆಲ್ ನಡಾಲ್, ನಾಡಿಯಾ ಕೊಮಾನೆಸಿ ಮತ್ತು ಸೆರೆನಾ ವಿಲಿಯಮ್ಸ್ ಒಲಿಂಪಿಕ್ ಜ್ಯೋತಿಯೊಂದಿಗೆ.
ಸೀನೆ ನದಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ತೇಲುವ ಪರೇಡ್‌ನಲ್ಲಿ ಭಾರತದ ಕ್ರೀಡಾಪಟುಗಳು.
ಆತಿಥೇಯ ಫ್ರಾನ್ಸ್ ಕ್ರೀಡಾಪಟುಗಳು
ಉದ್ಘಾಟನೆ ಕಾರ್ಯಕ್ರಮದಲ್ಲಿ ಲೇಡಿ ಗಾಗಾ ಕಾರ್ಯಕ್ರಮ
ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಸೇಂಟ್-ಡೆನಿಸ್‌ನಲ್ಲಿ ನಡೆದ ಒಲಿಂಪಿಕ್ ಟಾರ್ಚ್ ರಿಲೇಯಲ್ಲಿ ಯುಎಸ್ ರಾಪರ್ ಸ್ನೂಪ್ ಡಾಗ್ ಒಲಿಂಪಿಕ್ ಜ್ಯೋತಿಯೊಂದಿಗೆ
ಐಫೆಲ್ ಟವರ್‌ನಲ್ಲಿ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆ ನೀತಾ ಅಂಬಾನಿ ಮತ್ತು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ.
ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರು ಒಲಿಂಪಿಕ್ ಜ್ಯೋತಿಯೊಂದಿಗೆ.