Silk Smitha: ಬಯೋಪಿಕ್‌ನಲ್ಲಿ ಸಿಲ್ಕ್ ಸ್ಮಿತಾ ಗೆ ಎಷ್ಟು ಹೋಲುತ್ತಾರೆ ಚಂದ್ರಿಕಾ ರವಿ?
Vishwanath S
ದಕ್ಷಿಣ ಭಾರತದ ರಾಣಿ, ಹಾಟ್ ಬೆಡಗಿ ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಕುರಿತ ಕೆಲಸಗಳು 2023ರಿಂದಲೂ ತಮಿಳಿನಲ್ಲಿ ನಡೆಯುತ್ತಿದೆ.
Photos | Chandrika Ravi Instagram
ಸಿಲ್ಕ್ ಪಾತ್ರದಲ್ಲಿ ಯಾರೂ ಅಭಿನಯಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಇದೀಗ ಅದಕ್ಕೆ ಸ್ಪಷ್ಟನೆ ಸಿಕ್ಕಿದ್ದು ಚಂದ್ರಿಕಾ ರವಿ ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ದಿವಂಗತ ನಟಿ ಸಿಲ್ಕ್ ಸ್ಮಿತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಚಿತ್ರದ ಹೊಸ ಶೀರ್ಷಿಕೆ ಮತ್ತು ಫಸ್ಟ್-ಲುಕ್ ಗ್ಲಿಂಪ್ಸ್ ಅನ್ನು STRI ಸಿನಿಮಾಸ್ ಪ್ರಕಟಿಸಿದೆ.
ಸಿಲ್ಕ್ ಸ್ಮಿತಾ-ಕ್ವೀನ್ ಆಫ್ ದಿ ಸೌತ್ ಎಂದು ಶೀರ್ಷಿಕೆ ಇಡಲಾಗಿದ್ದು ಈ ಚಿತ್ರವನ್ನು ಜಯರಾಮ್ ಶಂಕರನ್ ನಿರ್ದೇಶಿಸುತ್ತಿದ್ದಾರೆ. 2025ರ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ.
ಸಿಲ್ಕ್ ಸ್ಮಿತಾ - ಕ್ವೀನ್ ಆಫ್ ದಿ ಸೌತ್ ಅನ್ನು ಜನಪ್ರಿಯ ಕ್ರೀಡಾ ನಿರೂಪಕ, ನಟ ಮತ್ತು ನಿವೃತ್ತ ವೃತ್ತಿಪರ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ನಿರ್ಮಿಸಲಿದ್ದಾರೆ.
ಭಾರತದ ಹಲವು ಭಾಷೆಗಳಲ್ಲಿ ಕೆಲಸ ಮಾಡಿದ ಸಿಲ್ಕ್ ಸ್ಮಿತಾ ಅವರು 80 ಮತ್ತು 90ರ ದಶಕದ ಆರಂಭದಲ್ಲಿ ಉತ್ತುಂಗದಲ್ಲಿದ್ದರು. ವಿಜಯಲಕ್ಷ್ಮಿ ವಡ್ಲಪಾಟಿ ನಂತರ ಸಿಲ್ಕ್ ಸ್ಮಿತಾ ಆಗಿ ಬದಲಾದರು.
ಮೊದ ಮೊದಲ ಐಟಂ ಸಾಂಗಗಳಲ್ಲಿ ನಟಿಸುತ್ತಿದ್ದ ಸಿಲ್ಕ್ ನಂತರ ಸಿನಿಮಾಗಳಲ್ಲಿ ಕೆಲಸ ಮಾಡಲು ಶುರು ಮಾಡಿದ್ದು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
2011ರಲ್ಲಿ ಸಿಲ್ಕ್ ಸ್ಮಿತಾ ಅವರ ಜೀವನವನ್ನು ಆಧರಿಸಿದ ಹಿಂದಿ ಚಲನಚಿತ್ರ ದಿ ಡರ್ಟಿ ಪಿಕ್ಚರ್‌ನಲ್ಲಿ ವಿದ್ಯಾ ಬಾಲನ್ ನಟಿಸಿದರು. ತಮಿಳು ಚಿತ್ರ ಮಾರ್ಕ್ ಆಂಟೋನಿ ಸಹ ಎಸ್‌ಜೆ ಸೂರ್ಯ ಅವರನ್ನು ಒಳಗೊಂಡಿರುವ ಒಂದು ಅನುಕ್ರಮದಲ್ಲಿ ನಟನ ನೋಟವನ್ನು ಬಳಸಿದ್ದರು.