ಟಾಲಿವುಡ್ ನಟಿ ಮೇಘಾ ಆಕಾಶ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮೇಘಾ ತಾವು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
6 ವರ್ಷಗಳಿಂದ ಪ್ರೀತಿಸುತ್ತಿದ್ದ ಸಾಯಿ ವಿಷ್ಣು ಜೊತೆ ಮೇಘಾ ಮದುವೆ ಫಿಕ್ಸ್ ಆಗಿದ್ದು, ಇತ್ತೀಚೆಗೆ ಈ ಜೋಡಿ ಹೈದರಾಬಾದ್‌ನಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ.
ಮೇಘಾ ಹಾಗೂ ವಿಷ್ಣು ಎಂಗೇಜ್‌ಮೆಂಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಯಿ ವಿಷ್ಣು ಖ್ಯಾತ ರಾಜಕಾರಣಿಯೊಬ್ಬರ ಪುತ್ರರಾಗಿದ್ದು, 6 ವರ್ಷಗಳಿಂದ ಪ್ರೀತಿಯಲ್ಲಿದ್ದರೂ ಮೇಘಾ ಈ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಇದೇ ವರ್ಷ ನವೆಂಬರ್‌ನಲ್ಲಿ ಮೇಘಾ ಆಕಾಶ್ ಹಾಗೂ ಸಾಯಿ ವಿಷ್ಣು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹೈದರಾಬಾದ್‌ನಲ್ಲೇ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂದು ಮೇಘಾ ಕುಟುಂಬದ ಮೂಲಗಳು ತಿಳಿಸಿವೆ.
ಮೇಘಾ ಆಕಾಶ್, ತೆಲುಗು - ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ನಟಿ ಮೇಘಾ ಇನ್ ಸ್ಟಾಗ್ರಾಂನಲ್ಲಿ ಅ್ಯಕ್ಟಿವ್ ಆಗಿದ್ದು, 4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
2017 ರಲ್ಲಿ ತೆರೆ ಕಂಡ ಲೀ ತೆಲಗು ಚಿತ್ರದ ಮೂಲಕ ಮೇಘಾ ಆಕಾಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.