ನೀರಜ್ ಚೋಪ್ರಾ ಅವರ ಅತ್ಯುತ್ತಮ ಥ್ರೋ 89.94 ಮೀ, ಜೂನ್ 30, 2022 ರಂದು ಸ್ವೀಡನ್‌ನಲ್ಲಿನ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಸಾಧಿಸಿದರು. ಇದು ಭಾರತದಲ್ಲಿ ಪುರುಷರ ರಾಷ್ಟ್ರೀಯ ದಾಖಲೆ ಮತ್ತು ನೀರಜ್ ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ.
26 ವರ್ಷ ವಯಸ್ಸಿನ ನೀರಜ್ ಜಾವೆಲಿನ್ ಅನ್ನು 84 ಮೀ ಎಸೆದು ಅರ್ಹತಾ ಗುರುತನ್ನು ಸುಲಭವಾಗಿ ಮೀರಿದರು. ಅದು 89.34 ಮೀಟರ್, ಆ ಸೀಸನ್ ನಲ್ಲೇ ಅತ್ಯುತ್ತಮ ಎಂದು ದಾಖಲಾಗಿದೆ.
ನೀರಜ್ ಚೋಪ್ರಾ ಅವರ ಎರಡನೇ ಅತ್ಯುತ್ತಮ ಥ್ರೋ ಪಾವೋ ನೂರ್ಮಿ ಗೇಮ್ಸ್ 2022 ರಲ್ಲಿ ಬಂದಿತು. ಅಲ್ಲಿ ಅವರು ಜೂನ್ 14, 2022 ರಂದು 89.30 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು.
ನೀರಜ್ ಚೋಪ್ರಾ ಅವರ ವೃತ್ತಿಜೀವನದ ಮೂರನೇ ಅತ್ಯುತ್ತಮ ಥ್ರೋ 2022 ರ ಲಾಸನ್ನೆ ಡೈಮಂಡ್ ಲೀಗ್‌ನಲ್ಲಿ ಬಂದಿತು, ಅಲ್ಲಿ ಅವರು 89.08 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು.
2023 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 88.88 ಮೀಟರ್‌ಗಳಷ್ಟು ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು. ಇದು ಅವರ ವೃತ್ತಿಜೀವನದಲ್ಲಿ ಇದುವರೆಗಿನ ನಾಲ್ಕನೇ ಅತ್ಯುತ್ತಮ ಎಸೆತವಾಗಿದೆ.