ಬುಧವಾರ ಮುಂಜಾನೆ ಪ್ರಬಲ ಭೂಕಂಪವು ಇಡೀ ತೈವಾನ್ ದ್ವೀಪವನ್ನು ನಡುಗಿಸಿದೆ. ಘಟನೆಯಲ್ಲಿ ಇದುವರೆಗೆ 9 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.
ತೈವಾನ್ ನಲ್ಲಿ ಏ.03 ರಂದು ಪ್ರಬಲ ಭೂಕಂಪ ಸಂಭವಿಸಿದ್ದು, 25 ವರ್ಷಗಳಲ್ಲೇ ಕಂಡು ಕೇಳರಿಯದ ಪ್ರಮಾಣದ ಭೂಕಂಪ ಇದಾಗಿದೆ.
ಹುವಾಲಿಯನ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾದಂತೆ ಕಂಡುಬಂದಿದೆ, ಅದರ ಮೊದಲ ಮಹಡಿ ಕುಸಿದಿದೆ ಮತ್ತು ಉಳಿದವು ವಾಲುತ್ತಿದೆ.
ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕ್ರೀಡಾ ಮೈದಾನಗಳಿಗೆ ಸ್ಥಳಾಂತರಿಸಿ, ಅವರನ್ನು ಹಳದಿ ಸುರಕ್ಷತಾ ಹೆಲ್ಮೆಟ್‌ಗಳೊಂದಿಗೆ ಸಜ್ಜುಗೊಳಿಸಿದ್ದವು
ಇತ್ತೀಚಿನ ವರ್ಷಗಳಲ್ಲಿ ತೈವಾನ್‌ನ ಅತ್ಯಂತ ಭೀಕರವಾದ ಭೂಕಂಪವು ಸೆಪ್ಟೆಂಬರ್ 21, 1999 ರಂದು 7.7 ರ ತೀವ್ರತೆಯೊಂದಿಗೆ ಸಂಭವಿಸಿ, 2,400 ಸಾವುಗಳಿಗೆ ಕಾರಣವಾಗಿತ್ತು, ಆಗ ಸುಮಾರು 100,000 ಜನರು ಗಾಯಗೊಂಡಿದ್ದರು ಮತ್ತು ಸಾವಿರಾರು ಕಟ್ಟಡಗಳನ್ನು ನಾಶವಾಗಿತ್ತು.
ನ್ಯೂ ತೈಪೆ ನಗರದಲ್ಲಿನ ಹಾನಿಗೊಳಗಾದ ಕಟ್ಟಡದಲ್ಲಿ ಬದುಕುಳಿದವರನ್ನು ಹುಡುಕುತ್ತಿರುವ ತುರ್ತು ರಕ್ಷಣಾ ಕಾರ್ಯಾಚರಣೆಯ ಕಾರ್ಯಕರ್ತರು.